ಸಾರಾಂಶ
ಇದೇ ಜ.13ರಿಂದ ಫೆ.26ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಬೆದರಿಕೆ ಹಾಕಿದ್ದು, 'ಮಹಾ ಕುಂಭಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ 'ಎಂದು ವಿಡಿಯೋ ಹರಿ ಬಿಟ್ಟಿದ್ದಾನೆ.
ಪ್ರಯಾಗ್‌ರಾಜ್: ಇದೇ ಜ.13ರಿಂದ ಫೆ.26ರವರೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಮತ್ತೊಮ್ಮೆ ಬೆದರಿಕೆ ಹಾಕಿದ್ದು, 'ಮಹಾ ಕುಂಭಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ 'ಎಂದು ವಿಡಿಯೋ ಹರಿ ಬಿಟ್ಟಿದ್ದಾನೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಪನ್ನೂ, 'ಪ್ರಯಾಗ್‌ರಾಜ್ ಚಲೋ ನಡೆಸಬೇಕು. ಹಿಂದುತ್ವದ ಸಿದ್ದಾಂತವನ್ನು ಕೊಂದು ಹಾಕಿ 2025ರ ಮಹಾಕುಂಭ ಮೇಳವನ್ನು ರಣರಂಗವನ್ನಾಗಿ ಮಾಡುತ್ತೇನೆ' ಎಂದು ಆತ ಹೇಳಿದ್ದಾನೆ.
ಮತ್ತೊಂದು ವಿಡಿಯೋದಲ್ಲಿ, 'ಪ್ರಮುಖ ದಿನಗಳನ್ನು ಗುರಿಯಾಗಿಸಿ ಕಾಶ್ಮೀರಿಗಳು ಹಾಗೂ ಖಲಿಸ್ತಾನಿಗಳು ದಾಳಿ ಮಾಡಬೇಕು' ಎಂದು ಕರೆ ನೀಡಿದ್ದಾನೆ. ಅಲ್ಲದೆ ಲಖನೌ ಮತ್ತು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನಿ ಧ್ವಜಗಳನ್ನು ಹಾರಿಸಬೇಕು ಎಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾನೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಖಿಲ ಭಾರತೀಯ ಅಖಾಡ್ ಪರಿಷದ್, 'ಪನ್ನು ಒಬ್ಬ ಹುಚ್ಚ, ಆತ ಬಂದರೆ ಹೊಡೆದು ಓಡಿಸುತ್ತೇವೆ" ಎಂದಿದೆ.
ಬಿಹಾರದಲ್ಲಿ 11 ವರ್ಷದ ಬಾಲಕ ವಶಕ್ಕೆ:
ಇತ್ತ ಬಿಹಾರದಲ್ಲಿ 11ನೇ ತರಗತಿಯ ವಿದ್ಯಾರ್ಥಿಯೋರ್ವ ಮಹಾ ಕುಂಭಮೇಳಕ್ಕೆ ಬಾಂಬ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಆತನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.
ವಿಡಿಯೋದಲ್ಲೇನಿದೆ?
• ಹಿಂದುತ್ವದ ಸಿದ್ಧಾಂತ ಕೊಂದು ಹಾಕಿ 2025ರ ಕುಂಭಮೇಳವನ್ನು ರಣಾಂಗಣ ಮಾಡುತ್ತೇವೆ
• ಪ್ರಮುಖ ದಿನಗಳನ್ನು ಗುರಿಯಾಗಿಸಿ ಕಾಶ್ಮೀರಿಗಳು, ಖಲಿಸ್ತಾನಿಗಳು ಭಾರತದಲ್ಲಿ ದಾಳಿ ನಡೆಸಬೇಕು
• ಲಖನೌ, ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನಿ ಧ್ವಜ ಹಾರಿಸಬೇಕು: ಉಗ್ರ ಪನ್ನು ಕರೆ
• ಈ ಹಿಂದೆ ಕೂಡಾ ಕುಂಭಮೇಳದ ಆಯ್ದ ದಿನ ಗುರಿ ಮಾಡಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದ ಉಗ್ರ