ಜ.26ರಂದು ಪಂಜಾಬ್‌ ಸಿಎಂ, ಡಿಜಿಪಿ ಹತ್ಯೆ: ಪನ್ನು ಬೆದರಿಕೆ

| Published : Jan 17 2024, 01:46 AM IST / Updated: Jan 17 2024, 01:17 PM IST

ಸಾರಾಂಶ

ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಜ.26ರ ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಮತ್ತು ಪೊಲೀಸ್‌ ಮಹಾನಿರ್ದೇಶಕರನ್ನು ಕೊಲ್ಲುವ ಬೆದರಿಕೆ ಹಾಕಿದ್ದಾನೆ.

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಜ.26ರ ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಮತ್ತು ಪೊಲೀಸ್‌ ಮಹಾನಿರ್ದೇಶಕರನ್ನು ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ. ಈ ಕುರಿತು ವಿಡಿಯೋ ಸಂದೇಶ ಮಾಡಿರುವ ಪನ್ನೂನ್‌, ‘ಗಣರಾಜ್ಯೋತ್ಸವದಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಸಿಂಗ್ ಮಾನ್‌ ಮತ್ತು ಪೊಲೀಸ್‌ ಮಹಾನಿರ್ದೇಶಕರಾದ ಗೌರವ್‌ ಯಾದವ್‌ರನ್ನು ಸಂಘಟನೆಯ ಸದಸ್ಯರೆಲ್ಲ ಒಗ್ಗೂಡಿ ದಾಳಿ ಮಾಡಿ ಸಾಯಿಸಬೇಕು’ ಎಂದು ಕರೆ ನೀಡಿದ್ದಾನೆ. 

ಭಾರತ ಸರ್ಕಾರದಿಂದ 2020ರಲ್ಲೇ ವೈಯಕ್ತಿಕ ಉಗ್ರ ಎಂದು ಘೋಷಿಸಲ್ಪಟ್ಟಿರುವ ಗುರುಪತ್ವಂತ್‌ ಸಿಂಗ್‌, ವಿದೇಶದಲ್ಲಿ ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯನ್ನು ಸ್ಥಾಪಿಸಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾನೆ. 

ಇದಕ್ಕೂ ಮೊದಲು ಭಾರತದ ಹಲವಾರು ಮಹತ್ವದ ಸ್ಥಳಗಳು ಮತ್ತು ವ್ಯಕ್ತಿಗಳ ಮೇಲೆ ದಾಳಿ ಮಾಡುವುದಾಗಿ ಹುಸಿ ಬೆದರಿಕೆ ಕರೆ ಒಡ್ಡಿದ್ದ.