ಸಾರಾಂಶ
ಭಾರತದ ಬದ್ಧ ದ್ವೇಷಿಯಾಗಿರುವ ಖಲಿಸ್ತಾನಿ ತನ್ನ ಹೊಸ ಎದುರಾಳಿಯನ್ನು ಹುಡುಕಿಕೊಂಡಿದೆ. ತನ್ನ ಸಂಕಟಗಳಿಗೆ ಭಾರತವೇ ಕಾರಣ ಎಂದು ದೂರುತ್ತಿರುವ ಖಲಿಸ್ತಾನಿಗಳು ಈಗ ತನಗೆ ಆಶ್ರಯ ನೀಡಿದ ಕೆನಡಿಯನ್ನರನ್ನೇ ಹಳಿಯುತ್ತಿದೆ
ನವದೆಹಲಿ: ಭಾರತದ ಬದ್ಧ ದ್ವೇಷಿಯಾಗಿರುವ ಖಲಿಸ್ತಾನಿ ತನ್ನ ಹೊಸ ಎದುರಾಳಿಯನ್ನು ಹುಡುಕಿಕೊಂಡಿದೆ. ತನ್ನ ಸಂಕಟಗಳಿಗೆ ಭಾರತವೇ ಕಾರಣ ಎಂದು ದೂರುತ್ತಿರುವ ಖಲಿಸ್ತಾನಿಗಳು ಈಗ ತನಗೆ ಆಶ್ರಯ ನೀಡಿದ ಕೆನಡಿಯನ್ನರನ್ನೇ ಹಳಿಯುತ್ತಿದೆ. ಕೆನಡಾ ನಿವಾಸಿಗಳು ಕೆನಡಾವನ್ನೇ ತೊರೆದು ಇಂಗ್ಲೆಂಡ್, ಯುರೋಪ್‌ಗೆ ಮರಳುವಂತೆ ಉಪದೇಶ ನೀಡಿದೆ.
‘ನಗರ ಕೀರ್ತನೆ’ ಕುರಿತ ವಿಡಿಯೋದಲ್ಲಿ ಖಲಿಸ್ತಾನಿಗಳು, ‘ಇದು ಕೆನಡಾ, ನಮ್ಮ ಸ್ವಂತ ರಾಷ್ಟ್ರ, ನೀವು (ಕೆನಡಿಯನ್ನರು) ನಿಮ್ಮ ದೇಶಕ್ಕೆ ಮರಳಿ’ ಎಂದು ಘೋಷಣೆ ಕೂಗಿರುವುದು ಕಂಡುಬಂದಿದೆ.ಇದು ಕೆನಡಾದಲ್ಲಿ ಖಲಿಸ್ತಾನಿಗಳ ವಿಲಕ್ಷಣ ಮಾದರಿಯ ಹೊಸ ರೂಪವಾಗಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ಬಣ್ಣಿಸಿವೆ. ‘ಖಲಿಸ್ತಾನಿ ಕೆನಡಾದ ಎಲ್ಲ ಅಂಶಗಳ ಮೇಲೆ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ದೇಶದ ಪ್ರದೇಶಗಳ ಕೆನಡಿಯನ್ನರ ಮೇಲೆ ಖಲಿಸ್ತಾನಿ ಗುಂಪುಗಳು ನಿಯಂತ್ರಣ ಸಾಧಿಸುತ್ತಿವೆ. ರಕ್ಷಣೆ ನೀಡಲು ಹಿಂದೂಗಳ ಬಳಿ ಹಣ ಕೇಳುತ್ತಿದ್ದಾರೆ. ಅಲ್ಲಿ ಸ್ಥಳೀಯರಿಗೆ ಖಲಿಸ್ತಾನಿಗಳಿಂದ ಬೆದರಿಕೆ ಇದೆ’ ಎಂದು ಗುಪ್ತಚರ ಮೂಲಗಳು ಹೇಳಿವೆ.