ಸಾರಾಂಶ
ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿರುವ ವಿದೂಷಕ ಕುನಾಲ್ ಕಾಮ್ರಾ ಇದೀಗ ತಮ್ಮ ’ನಯಾ ಭಾರತ್’ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ, ರಾಜ್ಯಸಭೆ ಸಂಸದೆ ಸುಧಾ ಮೂರ್ತಿ ಬಗ್ಗೆ ಲೇವಡಿ ಮಾಡಿದ್ದಾರೆ.
ನವದೆಹಲಿ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯಿಂದ ವಿವಾದಕ್ಕೆ ಗುರಿಯಾಗಿರುವ ವಿದೂಷಕ ಕುನಾಲ್ ಕಾಮ್ರಾ ಇದೀಗ ತಮ್ಮ ’ನಯಾ ಭಾರತ್’ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ, ರಾಜ್ಯಸಭೆ ಸಂಸದೆ ಸುಧಾ ಮೂರ್ತಿ ಬಗ್ಗೆ ಲೇವಡಿ ಮಾಡಿದ್ದಾರೆ. ‘
ಸುಧಾ ಮೂರ್ತಿ ನಾನು ಸಿಂಪಲ್ ಎಂದು ಆಗಾಗ ಹೇಳುತ್ತ ನಾರಾಯಣಮೂರ್ತಿ ಅವರ ತಲೆ ತಿನ್ನುತ್ತಿರುತ್ತಾರೆ. ಅದಕ್ಕೇ ನಾರಾಯಣ ಮೂರ್ತ ನಾನು ಮನೆಯಿಂದ ಹೊರಗುಳಿಯುತ್ತೇನೆ ಎನ್ನುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ. ‘ದೇಶದಲ್ಲಿ ಹಲವು ವ್ಯಕ್ತಿಗಳು ಶ್ರೀಮಂತರಾಗಿರುತ್ತಾರೆ. ಆದರೆ ನಾವು ಮಧ್ಯಮ ವರ್ಗಕ್ಕೆ ಸೇರಿದವರು ಎಂದು ನಾಟಕ ಮಾಡುತ್ತಾರೆ. ಅದರಲ್ಲಿ ಸುಧಾ ಮೂರ್ತಿ ಕೂಡ ಒಬ್ಬರು. ತಮ್ಮನ್ನು ಸರಳ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಾರೆ.
50 ಪುಸ್ತಕಗಳನ್ನು ಬರೆದಿರುವುದಾಗಿ ಹೇಳಿಕೊಳ್ಳುತ್ತಾರೆ. ಎಲ್ಲ ವಿಮಾನ ನಿಲ್ದಾಣದಲ್ಲಿಯೂ ಸರಳತೆಯ ಹೆಸರಿನಲ್ಲಿ ಅವರಿಗಾಗಿಯೇ ಇಟ್ಟಿರುವ ಪುಸ್ತಕದ ವಿಭಾಗಗಳು ಇರುತ್ತದೆ. ನಾರಾಯಣ ಮೂರ್ತಿ ವಾರದ 70 ಗಂಟೆ ಕೆಲಸ ಮಾಡಬೇಕು ಎಂದು ಏಕೆ ಬಯಸುತ್ತಾರೆ ಎಂದು ಈಗ ನಿಮಗೆ ಅರ್ಥವಾಗಿದೆಯೇ? ಸುಧಾ ಮೂರ್ತಿ ನಾನು ಸಿಂಪಲ್ ಎಂದು ಆಗಾಗ ಹೇಳುತ್ತ ನಾರಾಯಣಮೂರ್ತಿ ಅವರ ತಲೆ ತಿನ್ನುತ್ತಿರುತ್ತಾರೆ.
ಅದಕ್ಕೇ ನಾರಾಯಣ ಮೂರ್ತಿ ನಾನು ಮನೆಯಿಂದ ಹೊರಗುಳಿಯುತ್ತೇನೆ ಎನ್ನುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ. ಮುಂದುವರೆದಂತೆ ‘ 2 ವರ್ಷ ಬ್ರಿಟನ್ ಪ್ರಧಾನಿಯ ಅತ್ತೆಯಾಗಿದ್ದರು. ಅವರು ಈಗ ರಾಜ್ಯಸಭೆಗೆ ಹೋಗುತ್ತಿದ್ದಾರೆ. ಇದು ಸರಳತೆ ಆಗಲು ಹೇಗೆ ಸಾಧ್ಯ’ ಎಂದಿದ್ದಾರೆ.
ಶಿಂಧೆಗೆ ದ್ರೋಹಿ ಎಂದಿದ್ದ ಕಾಮ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು
ಚೆನ್ನೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರನ್ನು ದ್ರೋಹಿ ಎಂದು ಕರೆದು ವಿವಾದಕ್ಕೆ ಗುರಿಯಾಗಿದ್ದ ವಿದೂಷಕ ಕುನಾಲ್ ಕಾಮ್ರಾಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ವಿವಾದಾತ್ಮಕ ಹೇಳಿಕೆ ಸಂಬಂಧ ಕಾಮ್ರಾ ವಿರುದ್ಧ ಶಿವಸೇನೆ ಶಾಸಕ ಮುರ್ಜಿ ಪಟೇಲ್ ಎನ್ನುವವರು ದೂರು ನೀಡಿದ್ದರು. ಹೇಳಿಕೆ ಸಂಬಂಧ ಮುಂಬೈ ಪೊಲೀಸರು ಕಾಮ್ರಾಗೆ ವಿಚಾರಣೆಗೆ ಹಾಜರಾಗುವಂತೆ ಎರಡು ಸಲ ನೋಟಿಸ್ ನೀಡಿದ್ದರು.
ಈ ನಡುವೆ ಚೆನ್ನೈಗೆ ತೆರಳಿದ್ದ ಕಾಮ್ರಾ, ‘2021ರಿಂದ ನಾನು ತಮಿಳುನಾಡು ನಿವಾಸಿ. ಆದರೆ ಈಗ ಮುಂಬೈ ಪೊಲೀಸರ ಬಂಧನ ಭೀತಿ ಎದುರಿಸುತ್ತಿದ್ದೇನೆ’ ಎಂದು ಹೇಳಿ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ರಿಲೀಫ್ ಸಿಕ್ಕಿದಂತಾಗಿದೆ.