ಮೋದಿ ಅಧಿಕಾರಾವಧಿಯಲ್ಲಿ ಖಾದಿ ಉತ್ಪನ್ನ ಮಾರಾಟ 5 ಪಟ್ಟು ಏರಿಕೆ

| Published : Jul 10 2024, 12:40 AM IST

ಸಾರಾಂಶ

ಖಾದಿ ಉತ್ಪನ್ನಗಳ ಬಳಕೆಗೆ ಸದಾ ಪ್ರಚಾರ ಮಾಡುವ ಪ್ರಧಾನಿ ನರೇಂದ್ರ ಅವರ 10 ವರ್ಷದ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದ ಆದಾಯ ಮೊದಲ ಬಾರಿಗೆ ರು.1.5 ಲಕ್ಷ ಕೋಟಿ ದಾಟಿದೆ. ಜೊತೆಗೆ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅಂಕಿ ಅಂಶಗಳು ಹೇಳಿವೆ.

ನವದೆಹಲಿ: ಖಾದಿ ಉತ್ಪನ್ನಗಳ ಬಳಕೆಗೆ ಸದಾ ಪ್ರಚಾರ ಮಾಡುವ ಪ್ರಧಾನಿ ನರೇಂದ್ರ ಅವರ 10 ವರ್ಷದ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದ ಆದಾಯ ಮೊದಲ ಬಾರಿಗೆ ರು.1.5 ಲಕ್ಷ ಕೋಟಿ ದಾಟಿದೆ. ಜೊತೆಗೆ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಮೋದಿ ಅಧಿಕಾರಕ್ಕೆ ಬಂದ 2013-14ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವಾರ್ಷಿಕ ಆದಾಯ 31154 ಕೋಟಿ ರು.ನಷ್ಟಿತ್ತು. 2023-24ರಲ್ಲಿ ಈ ಆದಾಯವು 1.55 ಲಕ್ಷ ಕೋಟಿ ರು. ತಲುಪಿದೆ. ಈ ಅವಧಿಯಲ್ಲಿ ಉತ್ಪಾದನೆ ಶೇ.315ರಷ್ಟು ಮತ್ತು ಮಾರಾಟ ಶೇ.400ರಷ್ಟು ಮಾರಾಟ ಹೆಚ್ಚಳವಾಗಿದೆ ಎಂದು ಮಂಡಳಿ ಅಧ್ಯಕ್ಷ ಮನೋಜ್ ಕುಮಾರ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಬಜೆಟ್‌ ಹಿನ್ನೆಲೆ ನಾಳೆ ಆರ್ಥಿಕ ತಜ್ಞರ ಜೊತೆ ಮೋದಿ ಚರ್ಚೆನವದೆಹಲಿ: ಜು.23ರಂದು ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜು.11ರಂದು ಹಲವು ಆರ್ಥಿಕ ತಜ್ಞರನ್ನು ಭೇಟಿ ಮಾಡಲಿದ್ದಾರೆ. ಈ ಸಭೆಯಲ್ಲಿ ಆರ್ಥಿಕ ತಜ್ಞರ ಬಳಿ ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಪಡೆಯಲಿದ್ದಾರೆ. ಜತೆಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಾರ್ಗಸೂಚಿಯನ್ನು ಹಾಕುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಮತ್ತು ಇತರ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ.ಕೇಂದ್ರ ಬಜೆಟ್‌ ಹಿನ್ನೆಲೆ ನಾಳೆ ಆರ್ಥಿಕ ತಜ್ಞರ ಜೊತೆ ಮೋದಿ ಚರ್ಚೆನವದೆಹಲಿ: ಜು.23ರಂದು ಲೋಕಸಭೆಯಲ್ಲಿ ಬಜೆಟ್‌ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜು.11ರಂದು ಹಲವು ಆರ್ಥಿಕ ತಜ್ಞರನ್ನು ಭೇಟಿ ಮಾಡಲಿದ್ದಾರೆ. ಈ ಸಭೆಯಲ್ಲಿ ಆರ್ಥಿಕ ತಜ್ಞರ ಬಳಿ ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಪಡೆಯಲಿದ್ದಾರೆ. ಜತೆಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಮಾರ್ಗಸೂಚಿಯನ್ನು ಹಾಕುವ ನಿರೀಕ್ಷೆಯಿದೆ. ಈ ಸಭೆಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಮತ್ತು ಇತರ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ.