ಭಾರತ ಮತ್ತೊಮ್ಮೆ ಪಾಕಿಸ್ತಾನ ಹಾಗೂ ಅದರ ಉಗ್ರರ ವಿರುದ್ಧ ಸಿಡಿದೇಳುವಂತೆ ಮಾಡಿದ ಪಹಲ್ಗಾಂ ದಾಳಿಯ ಹಿಂದೆ, 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಆಗಿರುವ ಲಷ್ಕರ್‌ ಎ ತೊಯ್ಬಾದ ಮುಖ್ಯಸ್ಥ ಹಫೀಜ್‌ ಸಯೀದ್‌ ಕೈವಾಡ ಸಂಬಂಧ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ನವದೆಹಲಿ: ಭಾರತ ಮತ್ತೊಮ್ಮೆ ಪಾಕಿಸ್ತಾನ ಹಾಗೂ ಅದರ ಉಗ್ರರ ವಿರುದ್ಧ ಸಿಡಿದೇಳುವಂತೆ ಮಾಡಿದ ಪಹಲ್ಗಾಂ ದಾಳಿಯ ಹಿಂದೆ, 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್‌ ಆಗಿರುವ ಲಷ್ಕರ್‌ ಎ ತೊಯ್ಬಾದ ಮುಖ್ಯಸ್ಥ ಹಫೀಜ್‌ ಸಯೀದ್‌ ಕೈವಾಡ ಸಂಬಂಧ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಪಹಲ್ಗಾಂನಲ್ಲಿ ದಾಳಿ ನಡೆದ ಕೆಲ ಹೊತ್ತಿನಲ್ಲೇ, ಲಷ್ಕರ್‌ನ ಉಪ ಸಂಘಟನೆಯಾದ ದ ರೆಸಿಸ್ಟನ್ಸ್‌ ಫ್ರಂಟ್‌ ರಾಕ್ಷಸೀ ಕೃತ್ಯದ ಹೊಣೆ ಹೊತ್ತುಕೊಂಡಿತ್ತು. ಅದರ ಬೆನ್ನುಹತ್ತಿದಾಗ, ಹಫೀಜ್‌ ಸಯೀದ್‌ ಮತ್ತು ಆತನ ಬಂಟ ಸೈಫುಲ್ಲಾನ ಪಾತ್ರ ಕಂಡುಬಂದಿದೆ. ಜೊತೆಗೆ ಈ ಹಿಂದೆ ಕಾಶ್ಮೀರದಲ್ಲಿ ನಡೆಸಿದ ಹಲವು ಉಗ್ರ ದಾಳಿಯ ಮಾದರಿಯಲ್ಲೇ ಈ ದಾಳಿಯನ್ನೂ ಕೂಡಾ ಸಂಘಟಿಸಲಾಗಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕುಮ್ಮಕ್ಕಿನಿಂದ ನಡೆಸಲಾದ ಕೃತ್ಯಕ್ಕೆ ವಿದೇಶಿ ಉಗ್ರರನ್ನು ಬಳಸಿಕೊಳ್ಳಲಾಗಿದೆ. ಅವರಿಗೆ ಸ್ಥಳೀಯ ಉಗ್ರ ಬೆಂಬಲಿಗರ ನೆರವು ಪಡೆದುಕೊಳ್ಳಲಾಗಿದೆ. ಈ ಮಾದರಿ ಹಫೀಜ್‌ನ ಉಗ್ರದಾಳಿಗಳಿಗೆ ಹೋಲಿಕೆಯಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ.