ಸರ್ಕಾರಿ ಗೌರವದೊಂದಿಗೆ ದಿವಂಗತ ರತನ್‌ಜಿ ಟಾಟಾ ಅವರ ಅಂತಿಮ ಸಂಸ್ಕಾರ : ಮಹಾರಾಷ್ಟ್ರ ಸಿಎಂ

| Published : Oct 10 2024, 05:02 AM IST

Eknath Shinde

ಸಾರಾಂಶ

ದಿವಂಗತ ರತನ್‌ಜಿ ಟಾಟಾ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಘೋಷಿಸಿದ್ದಾರೆ. ಆದರೆ ಅಂತಿಮ ಸಂಸ್ಕಾರದ ದಿನಾಂಕದ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

ಮುಂಬೈ: ‘ದಿವಂಗತ ರತನ್‌ಜಿ ಟಾಟಾ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಘೋಷಿಸಿದ್ದಾರೆ. ಆದರೆ ಅಂತಿಮ ಸಂಸ್ಕಾರದ ದಿನಾಂಕದ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

ಮಹಾನ್ ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ರತನ್ ಟಾಟಾ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರಿಗೆ ಈಗ 86 ವರ್ಷ. ಅವರ ನಿಧನದ ನಂತರ ಅವರು ಸಂಗ್ರಹಿಸಿದ 3800 ಕೋಟಿ ರೂ. ಸ್ವತ್ತನ್ನು ಯಾರು ಆಳುತ್ತಾರೆ ಎಂಬ ಪ್ರಶ್ನೆ ಉದ್ಭವಿಸಿದೆ. 

ಅವರ ಸಾಮ್ರಾಜ್ಯವನ್ನು ಮುಂದಿನ ದಿನಗಳಲ್ಲಿ ಯಾರು ಉಳಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.