ಕೂಡಲೇ ಕಾಶ್ಮೀರ, ಪಾಕ್‌ ತೊರೆಯಿರಿ: ಇಸ್ರೇಲ್‌, ಸಿಂಗಾಪುರ ಸೂಚನೆ

| N/A | Published : May 09 2025, 05:13 AM IST

indo pak news .jpg
ಕೂಡಲೇ ಕಾಶ್ಮೀರ, ಪಾಕ್‌ ತೊರೆಯಿರಿ: ಇಸ್ರೇಲ್‌, ಸಿಂಗಾಪುರ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ-ಪಾಕ್‌ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಕಾರಣ ಇಸ್ರೇಲ್‌, ಸಿಂಗಾಪುರ ಮತ್ತು ಅಮೆರಿಕ ತಮ್ಮ ನಾಗರಿಕರಿಗೆ ಕಾಶ್ಮೀರ ಮತ್ತು ಪಾಕಿಸ್ತಾನವನ್ನು ತುರ್ತಾಗಿ ತೊರೆಯುವಂತೆ ಸೂಚಿಸಿವೆ.

ಜೆರುಸಲೇಂ/ ಸಿಂಗಾಪುರ್‌: ಭಾರತ-ಪಾಕ್‌ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಕಾರಣ ಇಸ್ರೇಲ್‌, ಸಿಂಗಾಪುರ ಮತ್ತು ಅಮೆರಿಕ ತಮ್ಮ ನಾಗರಿಕರಿಗೆ ಕಾಶ್ಮೀರ ಮತ್ತು ಪಾಕಿಸ್ತಾನವನ್ನು ತುರ್ತಾಗಿ ತೊರೆಯುವಂತೆ ಸೂಚಿಸಿವೆ.

ಲಾಹೋರ್‌ನಲ್ಲಿ ಡ್ರೋನ್‌ ಸ್ಫೋಟವಾದ ಬೆನ್ನಲ್ಲೇ, ‘ಆ ಪ್ರದೇಶವನ್ನು ತೊರೆಯಿರಿ ಅಥವಾ ಸುರಕ್ಷಿತ ಸ್ಥಳಗಳಿಗೆ ಹೋಗಿ’ ಎಂದು ಅಮೆರಿಕ ತನ್ನ ಅಧಿಕಾರಿಗಳು ಮತ್ತು ನಾಗರಿಕರಿಗೆ ಹೇಳಿದೆ.

ಅತ್ತ ಶ್ರೀಲಂಕಾ ವಿಮಾನಯಾನ ಸಂಸ್ಥೆ, ಲಾಹೋರ್‌ಗೆ ಪ್ರಯಾಣಿಸಲಿದ್ದ ತನ್ನೆಲ್ಲಾ ವಿಮಾನಗಳನ್ನುತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಆದರೆ ಕರಾಚಿಗೆ ವಿಮಾನ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದೆ.

ಇಸ್ರೇಲ್‌ ಕೂಡ ಕಾಶ್ಮೀರದಲ್ಲಿರುವ ತನ್ನ ಪ್ರಜೆಗಳಿಗೆ ಅಲ್ಲಿಂದ ಹಾಗ ಖಾಲಿ ಮಾಡಿ ಎಂದಿದೆ. ‘ಲಡಾಖ್‌ ಹೊರತುಪಡಿಸಿ ಜಮ್ಮು ಕಾಶ್ಮೀರದತಿತರೆ ಜಾಗಗಳಿಗೆ ಹೋಗದಿರಿ ಮತ್ತು ಸ್ಥಳೀಯ ಪಡೆಗಳ ನಿರ್ದೇಶನಗಳನ್ನು ಪಾಲಿಸಿ’ ಎಂದು ಇಸ್ರೇಲ್‌ ವಿದೇಶಾಂಗ ಸಚಿವರು ಹೇಳಿದ್ದಾರೆ.

ಸಿಂಗಾಪುರ ಕೂಡ, ಜಮ್ಮು ಕಾಶ್ಮೀರಕ್ಕೆ ಅನವಶ್ಯಕ ಪ್ರಯಾಣ ಕೈಗೊಳ್ಳದಂತೆ ಮತ್ತು ಗಡಿ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.