ಸಾರಾಂಶ
: ಪಾಕ್ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರು ಭಾರತ ಹಾಗೂ ವಿಶ್ವದ ಮೇಲೆ ಅಣುದಾಳಿ ಬೆದರಿಕೆ ಹಾಕಿದ ನಂತರ ಪಾಕ್ ವಿಪಕ್ಷ ನೇತಾರ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಅದೇ ಮಾತು ಆಡಿದ್ದಾರೆ. ‘ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಪರಿಗಣಿಸದೆ ಬೇರೆ ದಾರಿಯಿಲ್ಲ’ ಎಂದು ಅವರು ಎಚ್ಚರಿಸಿದ್ದಾರೆ.
- ಸಿಂಧು ನೀರು ನಿಲ್ಲಿಸಿದರೆ ಯುದ್ಧ ಅನಿವಾರ್ಯ
- ಇದು ಭಾರತ ಸೋಲುವ ಯುದ್ಧವಾಗಲಿದೆಇಸ್ಲಾಮಾಬಾದ್: ಪಾಕ್ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರು ಭಾರತ ಹಾಗೂ ವಿಶ್ವದ ಮೇಲೆ ಅಣುದಾಳಿ ಬೆದರಿಕೆ ಹಾಕಿದ ನಂತರ ಪಾಕ್ ವಿಪಕ್ಷ ನೇತಾರ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಅದೇ ಮಾತು ಆಡಿದ್ದಾರೆ. ‘ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಪರಿಗಣಿಸದೆ ಬೇರೆ ದಾರಿಯಿಲ್ಲ’ ಎಂದು ಅವರು ಎಚ್ಚರಿಸಿದ್ದಾರೆ.ಸಿಂಧ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಸಿಂಧು ಒಪ್ಪಂದ ಸ್ಥಗಿತಗೊಳಿಸಿ ಭಾರತವು ಪಾಕಿಸ್ತಾನಕ್ಕೆ ದೊಡ್ಡ ಹಾನಿ ಉಂಟುಮಾಡಿದೆ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲಾ ಪಾಕಿಸ್ತಾನಿಗಳು ಒಗ್ಗಟ್ಟಾಗಬೇಕು ಎಂದು ಒತ್ತಾಯಿಸಿದರು.
‘ಭಾರತವು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದನ್ನು ಮುಂದುವರಿಸಿದರೆ, ಪಾಕಿಸ್ತಾನಕ್ಕೆ ಯುದ್ಧವನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎನಿಸುತ್ತಿದೆ. ನೀವು (ಪಾಕಿಸ್ತಾನಿಗಳು) 6 ನದಿಗಳನ್ನು ಮರಳಿ ಪಡೆಯುವಷ್ಟು ಯುದ್ಧಕ್ಕೆ ಬಲಿಷ್ಠರಾಗಿದ್ದೀರಿ’ ಎಣದರು,‘ನಾವು ಯುದ್ಧವನ್ನು ಪ್ರಾರಂಭಿಸಲಿಲ್ಲ. ಆದರೆ ನೀವು ಸಿಂದೂರದಂತಹ ದಾಳಿ ಮಾಡಿದರೆ, ಪಾಕಿಸ್ತಾನದ ಎಲ್ಲ ಪ್ರಾಂತ್ಯದ ಜನರು ನಿಮ್ಮೊಂದಿಗೆ (ಭಾರತದೊಂದಿಗೆ) ಹೋರಾಡಲು ಸಿದ್ಧರಿದ್ದಾರೆ ಎಂದು ತಿಳಿಯಿರಿ , ಇದು ನೀವು ಖಂಡಿತವಾಗಿಯೂ ಸೋಲುವಂತಹ ಯುದ್ಧವಾಗಲಿದೆ. ನಾವು ತಲೆಬಾಗಲ್ಲ’ ಎಂದು ಎಚ್ಚರಿಸಿದರು.