ಭಾರತದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನವದೆಹಲಿ: ಭಾರತದ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ವಿಶ್ವದಲ್ಲೇ ಅತ್ಯಂತ ಬಲಿಷ್ಠ ವಿಮಾ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

‘ಬ್ರ್ಯಾಂಡ್‌ ಫೈನಾನ್ಸ್ ಇನ್ಷೂರೆನ್ಸ್‌ 100’ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯಲ್ಲಿ ಈ ಅಂಶವಿದೆ.ಎಲ್‌ಐಸಿಯ ಬ್ರ್ಯಾಂಡ್‌ ಮೌಲ್ಯ 9.8 ಶತಕೋಟಿ ಡಾಲರ್‌ನಲ್ಲೇ ಸ್ಥಿರವಾಗಿ ಮುಂದುವರೆದಿದೆ. 

ಬ್ರ್ಯಾಂಡ್‌ ಸ್ಟ್ರೆಂಥ್‌ ಇಂಡೆಕ್ಸ್‌ನಲ್ಲಿ ಎಲ್‌ಐಸಿ ಶೇ.88.3ರಷ್ಟು ಅಂಕ ಹೊಂದಿದೆ ಮತ್ತು ಬ್ರ್ಯಾಂಡ್‌ ಸ್ಟ್ರೆಂಥ್‌ ರೇಟಿಂಗ್‌ನಲ್ಲಿ ಎಎಎ ಸ್ತರ ಹೊಂದಿದೆ ಎಂದು ವರದಿ ಹೇಳಿದೆ. 

ಎಲ್‌ಐಸಿ ನಂತರದ ಸ್ಥಾನವನ್ನು ಕ್ಯಾಥೆ ಲೈಫ್‌ ಇನ್ಷೂರೆನ್ಷ್‌, ಎನ್‌ಆರ್‌ಎಂಎ ಇನ್ಷೂರೆನ್ಷ್‌ ಹೊಂದಿವೆ.ಇನ್ನು ಬ್ರ್ಯಾಂಡ್‌ ಮೌಲ್ಯದಲ್ಲಿ ಚೀನಾದ ಪಿಂಗ್‌ ಆ್ಯನ್‌, ಚೀನಾ ಲೈಫ್ ಇನ್ಷೂರೆನ್ಸ್‌ ಮತ್ತು ಸಿಪಿಐಸಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿವೆ.