ಸಾರಾಂಶ
ಬ್ಯಾಂಕ್‌ಗಳಲ್ಲಿ ಚಿನ್ನ ಅಡ ಇಟ್ಟುಕೊಂಡು ಸಾಲ ನೀಡುವ ವ್ಯವಸ್ಥೆಯನ್ನು ಇದೀಗ ಬೆಳ್ಳಿಗೂ ಆರ್‌ಬಿಐ ವಿಸ್ತರಿಸಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಸಾಲ ಮತ್ತು ಮರುಪಾವತಿಗೆ ಗಡುವು ವಿಧಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 2026ರ ಏ.1ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ.
ನವದೆಹಲಿ: ಬ್ಯಾಂಕ್‌ಗಳಲ್ಲಿ ಚಿನ್ನ ಅಡ ಇಟ್ಟುಕೊಂಡು ಸಾಲ ನೀಡುವ ವ್ಯವಸ್ಥೆಯನ್ನು ಇದೀಗ ಬೆಳ್ಳಿಗೂ ಆರ್‌ಬಿಐ ವಿಸ್ತರಿಸಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿಯ ಸಾಲ ಮತ್ತು ಮರುಪಾವತಿಗೆ ಗಡುವು ವಿಧಿಸಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. 2026ರ ಏ.1ರಿಂದ ಈ ಹೊಸ ನೀತಿ ಜಾರಿಗೆ ಬರಲಿದೆ.
ಮಾರ್ಗಸೂಚಿಯಲ್ಲಿ ಏನಿದೆ?:
ಆರ್‌ಬಿಐ ಸುತ್ತೋಲೆಯ ಪ್ರಕಾರ ಅಡವಿಡುವ ಚಿನ್ನದ ಪ್ರಮಾಣ1 ಕೇಜಿ ಮೀರಬಾರದು. ಬೆಳ್ಳಿ 10 ಕೇಜಿ ಮೀರುವಂತಿಲ್ಲ. ಒಂದು ವೇಳೆ ನಾಣ್ಯ ಅಡವಿಡುವುದಾದರೆ ಚಿನ್ನದ ನಾಣ್ಯದ ತೂಕ 50 ಗ್ರಾಂ, ಬೆಳ್ಳಿ ನಾಣ್ಯದ ತೂಕ 500 ಗ್ರಾಂ ಮೀರಬಾರದು. ಸಾಲದ ಪ್ರಮಾಣ ಚಿನ್ನ, ಬೆಳ್ಳಿ ತೂಕದ ಮೇಲೆ ಶೇ.85 ರಿಂದ ಶೇ.75ರ ಅನುಪಾತದಲ್ಲಿರುತ್ತದೆ. ಉದಾಹರಣೆಗೆ ನೀವು 1 ಲಕ್ಷ ರು. ಬೆಳ್ಳಿ ಆಭರಣವನ್ನು ಅಡವಿಟ್ಟರೆ 85 ಸಾವಿರ ಸಾಲ ಪಡೆಯಬಹುದು, ಅದೇ ನೀವು 5 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಬೆಳ್ಳಿ ಅಡವಿಟ್ಟರೆ ಅದರ ಶೇ.75ರಷ್ಟು ನಗದು ಸಿಗುತ್ತದೆ.
ಮರುಪಾವತಿಗೆ ಗಡುವು:
ಒಂದು ವೇಳೆ ವಿಫಲವಾದರೆ ಆತ ಅಡವಿಟ್ಟ ಚಿನ್ನ, ಬೆಳ್ಳಿಯನ್ನು ಹರಾಜು ಮಾಡಬಹುದು. ಸಾಲಗಾರನಿಗೆ ತಿಳಿಸಿದ ಬಳಿಕ ಒಂದು ತಿಂಗಳ ಅವಧಿಗೆ ಕಾಯಬೇಕು. ಹರಾಜು ಪ್ರಕ್ರಿಯೆಯಲ್ಲಿ ಮೀಸಲು ಬೆಲೆ ಅದರ ಪ್ರಸ್ತುತ ಬೆಲೆ ಶೇ.90ಕ್ಕಿಂತ ಕಡಿಮೆಯಿರಬಾರದು. ಒಂದು ವೇಳೆ ಎರಡು ಬಾರಿ ಹರಾಜು ಪ್ರಕ್ರಿಯೆ ವಿಫಲವಾದರೆ ಮೀಸಲು ಬೆಲೆ ಶೇ.85ಕ್ಕಿಂತ ಕಡಿಮೆಯಿರಬಾರದು
ಯಾವುದಕ್ಕಿಲ್ಲ ಸಾಲ?:
ಬೆಳ್ಳಿ ಮತ್ತು ಚಿನ್ನದ ಆಭರಣಗಳ ಮೇಲೆ ನೀಡುವ ಸಾಲಕ್ಕೂ ಆರ್‌ಬಿಐ ಒಂದಷ್ಟು ನಿಬಂಧನೆಗಳನ್ನು ಹೇರಿದೆ. ಸಂಸ್ಕರಣೆಯಾಗದ ಚಿನ್ನ ಅಥವಾ ಬೆಳ್ಳಿಗೆ ಸಾಲ ಸಿಗದು. ಜೊತೆಗೆ ಇಟಿಎಫ್, ಮ್ಯೂಚುವಲ್ ಫಂಡ್ ಘಟಕಗಳನ್ನೂ ಸಾಲದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅಲ್ಲದೆ ಮರುಪಾವತಿ ಅವಧಿಯನ್ನು 12 ತಿಂಗಳಿಗೆ ಸೀಮಿತಗೊಳಿಸಿದೆ.
ಎಲ್ಲೆಲ್ಲಿ ಸಾಲ?: ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳು, ವಾಣಿಜ್ಯ ಬ್ಯಾಂಕು, ಬ್ಯಾಂಕೇತರ ಹಣಕಾಸು ಸಂಸ್ಥೆ , ವಸತಿ ಹಣಕಾಸು ಸಂಸ್ಥೆ.
;Resize=(128,128))
;Resize=(128,128))
;Resize=(128,128))