ಸಾರಾಂಶ
ಇತ್ತೀಚೆಗೆ ದಿವಾಳಿಯಾಗಿರುವ ಮುಂಬೈನ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಟಿ ಪ್ರೀತಿ ಜಿಂಟಾ ಅವರ 18 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಕೇರಳ ಕಾಂಗ್ರೆಸ್ ಮಾಡಿದ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಮುಂಬೈ: ಇತ್ತೀಚೆಗೆ ದಿವಾಳಿಯಾಗಿರುವ ಮುಂಬೈನ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ನಟಿ ಪ್ರೀತಿ ಜಿಂಟಾ ಅವರ 18 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಕೇರಳ ಕಾಂಗ್ರೆಸ್ ಮಾಡಿದ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಆದರೆ ಇದಕ್ಕೆ ತಿರುಗೇಟು ನೀಡಿರುವ ಪ್ರೀತಿ ಝಿಂಟಾ, ಕಾಂಗ್ರೆಸ್ ಸುಳ್ಳು ಸುದ್ದಿ ಹರಡುವುದು ನೋಡಿ ಆಘಾತವಾಯಿತು. ನಾನು 10 ವರ್ಷದ ಹಿಂದೆಯೇ ಸಾಲ ಮರುಪಾವತಿಸಿದ್ದೇನೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ತನಿಖೆಗಾರರು ಕೂಡ ಬ್ಯಾಂಕ್ ದಿವಾಳಿ ತನಿಖೆಯಲ್ಲಿ ಪ್ರೀತಿ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ ಎಂದಿದ್ದಾರೆ.ಆಗಿದ್ದೇನು?:
‘ತಮ್ಮ ಸಾಮಾಜಿಕ ಜಾಲತಾಣದ ಖಾತೆಯನ್ನು ಬಿಜೆಪಿ ಪ್ರಚಾರಕ್ಕೆ ನೀಡಿದ ಪ್ರೀತಿ, 18 ಕೋಟಿ ರು. ಮನ್ನಾ ಮಾಡಿಸಿಕೊಂಡಿದ್ದಾರೆ’ ಎಂದು ಮಾಧ್ಯಮ ವರದಿ ಉಲ್ಲೇಖಿಸಿ ಕೇರಳ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.ಇದಕ್ಕೆ ಪ್ರತಿಕ್ರಿಯಿಸಿರುವ ಪ್ರೀತಿ ಝಿಂಟಾ, ‘ನನ್ನ ಎಕ್ಸ್ ಖಾತೆಯನ್ನು ನಾನೇ ನಿರ್ವಹಿಸುತ್ತೇನೆ. ಸುಳ್ಳು ಸುದ್ದಿಗೆ ಪ್ರೋತ್ಸಾಹ ನೀಡುವ ನಿಮಗೆ ನಾಚಿಕೆಯಾಗಬೇಕು. ನನ್ನ ಹೆಸರು ಮತ್ತು ಫೋಟೋ ಬಳಸಿ ರಾಜಕೀಯ ಪಕ್ಷವೊಂದು ಸುಳ್ಳುಸುದ್ದಿ ಮತ್ತು ಗಾಸಿಪ್‌ಗೆ ಪ್ರೋತ್ಸಾಹ ನೀಡುತ್ತಿರುವುದು ನೋಡಿ ಆಘಾತವಾಗಿದೆ. ನಾನು 10 ವರ್ಷಗಳ ಹಿಂದೆಯೇ ಸಾಲ ಮರುಪಾವತಿ ಮಾಡಿದ್ದೇನೆ’ ಎಂದಿದ್ದಾರೆ.
ಇದರ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಸ್ಪಷ್ಟನೆ ನೀಡಿದ್ದು, ‘ಮಾಧ್ಯಮ ವರದಿಯನ್ನಷ್ಟೇ ನಾವು ಪೋಸ್ಟ್ ಮಾಡಿದ್ದೇವೆ. ವರದಿಯಲ್ಲಿ ನಿಮ್ಮದೂ ಸೇರಿ ಹಲವರ ಹೆಸರು ಪ್ರಸ್ತಾಪಿಸಲಾಗಿತ್ತು ಎಂದಿದೆ. ಜತೆಗೆ, ಇತರೆ ಸೆಲೆಬ್ರಿಟಿಗಳ ರೀತಿ ನೀವು ನಿಮ್ಮ ಎಕ್ಸ್‌ಖಾತೆಯನ್ನು ಬಿಜೆಪಿ ಐಟಿ ಸೆಲ್‌ಗೆ ಒಪ್ಪಿಸಿಲ್ಲ ಎಂಬುದು ಕೇಳಿ ಖುಷಿಯಾಯಿತು‘ ಎಂದು ಹೇಳಿದೆ.