ಮಂಡಿಯಲ್ಲಿ ಕಂಗನಾ ವಿರುದ್ಧ ವಿಕ್ರಮಾದಿತ್ಯ ಸ್ಪರ್ಧೆ?

| Published : Apr 14 2024, 01:57 AM IST / Updated: Apr 14 2024, 06:34 AM IST

ಸಾರಾಂಶ

ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಅವರು ಸ್ಪರ್ಧಿಸಿರುವ ಮಂಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌, ಹಿಮಾಚಲ ಪ್ರದೇಶದ ಯುವ ಸಚಿವರಾಗಿ ಹೆಸರು ಗಳಿಸಿರುವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.

ಮಂಡಿ (ಹಿಮಾಚಲ ಪ್ರದೇಶ): ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಅವರು ಸ್ಪರ್ಧಿಸಿರುವ ಮಂಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌, ಹಿಮಾಚಲ ಪ್ರದೇಶದ ಯುವ ಸಚಿವರಾಗಿ ಹೆಸರು ಗಳಿಸಿರುವ ವಿಕ್ರಮಾದಿತ್ಯ ಸಿಂಗ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.

ಈ ಕುರಿತು ಅವರ ತಾಯಿ ಪ್ರತಿಭಾ ಸಿಂಗ್‌ ಸುಳಿವು ನೀಡಿದ್ದು, ಪಕ್ಷದ ಹಿರಿಯ ನಾಯಕರಲ್ಲಿ ವಿಕ್ರಮಾದಿತ್ಯ ಸಿಂಗ್‌ ಸ್ಪರ್ಧೆ ಕುರಿತು ಚರ್ಚಿಸಲಾಗಿದೆ. ಶೀಘ್ರದಲ್ಲಿ ಈ ಕುರಿತು ಪಕ್ಷದಿಂದ ಅಧಿಕೃತ ಘೋಷಣೆ ಹೊರಬೀಳಲಿದೆ ಎಂಬುದಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಈವರೆಗೆ ಕ್ಷೇತ್ರವನ್ನು ಪ್ರತಿಭಾ ಪ್ರತಿನಿಧಿಸುತ್ತಿದ್ದರು.

ಇದಕ್ಕೂ ಮೊದಲು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌ ಅವರು ಮಂಡಿಯಲ್ಲಿ ಕಂಗನಾರ ರೇಟ್‌ ಎಷ್ಟು ಎಂದು ಕೀಳಾಗಿ ಕೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಜೂ.1ರಂದು ಚುನಾವಣೆ ನಡೆಯಲಿದೆ.