ಸಾರಾಂಶ
ಉದ್ಯಮಿ ಗೌತಮ್ ಅದಾನಿ ಅವರ ಸಮೂಹ ಮೇಲಿನ ಸೌರ ವಿದ್ಯುತ್ ಹಗರಣ ಆರೋಪ ಹಾಗೂ ಸಂಭಲ್ ಕೋಮುಗಲಭೆ ಪ್ರಕರಣಗಳು ಸಂಸತ್ ಕಲಾಪವನ್ನು 2ನೇ ದಿನವೂ ಬಲಿಪಡೆದಿದೆ.
ನವದೆಹಲಿ : ಉದ್ಯಮಿ ಗೌತಮ್ ಅದಾನಿ ಅವರ ಸಮೂಹ ಮೇಲಿನ ಸೌರ ವಿದ್ಯುತ್ ಹಗರಣ ಆರೋಪ ಹಾಗೂ ಸಂಭಲ್ ಕೋಮುಗಲಭೆ ಪ್ರಕರಣಗಳು ಸಂಸತ್ ಕಲಾಪವನ್ನು 2ನೇ ದಿನವೂ ಬಲಿಪಡೆದಿದೆ.
ಅದಾನಿ ಸಮೂಹದ ವಿರುದ್ಧದ ಆರೋಪಗಳನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸಬೇಕು ಹಾಗೂ ರೂಲ್ 267ರ ಪ್ರಕಾರ ಎಲ್ಲ ಇತರ ವಿಷಯಗಳನ್ನು ಬಿಟ್ಟು ತಕ್ಷಣವೇ ಅದಾನಿ ಹಗರಣದ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ವಿಪಕ್ಷಗಳು ರಾಜ್ಯಸಭೆಯಲ್ಲಿ ಕೋರಿದವು. ಇದಕ್ಕೆ ಸ್ಪೀಕರ್ ಓಂಪ್ರಕಾಶ ಧನಕರ್ ಒಪ್ಪಲಿಲ್ಲ. ಆಗ ಕೋಲಾಹಲ ಜೋರಾಗಿ ದಿನದ ಮಟ್ಟಿಗೆ ಕಲಾಪ ಮುಂದೂಡಿಕೆ ಆಯಿತು,
ಇನ್ನು ಸಂಭಲ್ ಗಲಭೆ ಹಾಗೂ ಅದಾನಿ ಹಗರಣ ವಿಷಯ ಲೋಕಸಭೆಯಲ್ಲೂ ಪ್ರಸ್ತಾಪ ಆಗಿ ಈ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಆಗ್ರಹಿಸಿದವು. ಆಗ ಗದ್ದಲ ತೀವ್ರಗೊಂಡು ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
‘ಅದಾನಿ ಹಗರಣದ ಬಗ್ಗೆ ಚರ್ಚೆಗೆ ಸರ್ಕಾರ ಒಪ್ಪುತ್ತಿಲ್ಲ. ಸರ್ಕಾರದ ಮೊಂಡು ಹಟವೇ ಕಲಾಪ ಬಲಿ ಆಗಲು ಕಾರಣ’ ಎಂದು ಕಾಂಗ್ರೆಸ್ ಆರೋಪಿಸಿದೆ.