ಸ್ವಾಮಿ ಜಗನ್ನಾಥನೇ ಮೋದಿಯ ಭಕ್ತ: ಸಂಬಿತ್‌ ಪಾತ್ರ ವಿವಾದ

| Published : May 21 2024, 12:36 AM IST / Updated: May 21 2024, 05:29 AM IST

ಸ್ವಾಮಿ ಜಗನ್ನಾಥನೇ ಮೋದಿಯ ಭಕ್ತ: ಸಂಬಿತ್‌ ಪಾತ್ರ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

‘ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ಮೋದಿಯ ಭಕ್ತ’ ಎನ್ನುವ ಮೂಲಕ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಬಿಜೆಪಿ ನಾಯಕ ಸಂಬಿತ್‌ ಪಾತ್ರ ವಿವಾದ ಸೃಷ್ಟಿಸಿದ್ದಾರೆ.

ಭುವನೇಶ್ವರ: ‘ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ಮೋದಿಯ ಭಕ್ತ’ ಎನ್ನುವ ಮೂಲಕ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಬಿಜೆಪಿ ನಾಯಕ ಸಂಬಿತ್‌ ಪಾತ್ರ ವಿವಾದ ಸೃಷ್ಟಿಸಿದ್ದಾರೆ.

ಮತದಾನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ, ‘ಮಹಾಪ್ರಭು ಜಗನ್ನಾಥ ಮೋದಿಯ ಭಕ್ತ’ ಎಂದು ಹೇಳಿದರು. ಈ ಕುರಿತು ಕಾಂಗ್ರೆಸ್‌ ಹಾಗೂ ಬಿಜೆಡಿ ತೀವ್ರ ವಾಗ್ದಾಳಿ ನಡೆಸಿವೆ.

 ‘ಸಂಬಿತ್‌ ಪಾತ್ರ ಒಡಿಶಾ ಅಸ್ಮಿತೆಗೆ ಧಕ್ಕೆ ತಂದಿದ್ದು, ರಾಷ್ಟ್ರೀಯ ಮಾಧ್ಯಮದಲ್ಲಿ ಕೈ ಮುಗಿದು ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್‌ ಆಗ್ರಹಿಸಿದ್ದರೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ‘ಒಡಿಯಾ ಜನರ ಭಾವನೆಗೆ ಈ ಹೇಳಿಕೆಯಿಂದ ಧಕ್ಕೆ ಆಗಿದೆ’ ಎಂದಿದ್ದಾರೆ.