ಸಾರಾಂಶ
‘ಧ್ವನಿವರ್ಧಕಗಳು ಯಾವುದೇ ಧರ್ಮದ ಅಗತ್ಯವಾದುದ್ದಲ್ಲ. ಅವು ಧರ್ಮಕ್ಕೆ ಅವಶ್ಯಕವಾದವೂ ಅಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮುಂಬೈ: ‘ಧ್ವನಿವರ್ಧಕಗಳು ಯಾವುದೇ ಧರ್ಮದ ಅಗತ್ಯವಾದುದ್ದಲ್ಲ. ಅವು ಧರ್ಮಕ್ಕೆ ಅವಶ್ಯಕವಾದವೂ ಅಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮುಂಬೈನಲ್ಲಿ ಮಸೀದಿ ಮತ್ತು ಮದರಸಾಗಳು ಧ್ವನಿವರ್ಧಕಗಳನ್ನು ಬಳಸುತ್ತಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ಳದ ಬಗ್ಗೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ಧ್ವನಿವರ್ಧಕಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವಂತದ್ದು. ಅವುಗಳನ್ನು ನಿಷೇಧ ಮಾಡಿದರೆ ಅದು ಧರ್ಮದ ಹಕ್ಕು ಮತ್ತು ಆಚರಣೆಯ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತಾಗುವುದಿಲ್ಲ. ಇಂಥಹ ದೂರುಗಳು ಬಂದಲ್ಲಿ ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ತಮ್ಮ ಮೊಬೈಲ್‌ನಲ್ಲಿ ಶಬ್ದದ ಪ್ರಮಾಣ ಅಳೆವ ಅಪ್ಲಿಕೇಶನ್ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿತು.ಜೊತೆಗೆ ಈಗಾಗಲೇ ಧ್ವನಿವರ್ಧಕಗಳಿಗೆ ಹಗಲಿಗೆ 55 ಡೆಸಿಬಲ್ ರಾತ್ರಿ ವೇಳೆ 45 ಡೆಸಿಬಲ್ ಮಿತಿಯನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ಇದನ್ನು ಎಲ್ಲಾ ಧಾರ್ಮಿಕ ಕೇಂದ್ರಗಳು ಪಾಲಿಸಬೇಕು ಮತ್ತು ರಾಜ್ಯ ಸರ್ಕಾರ ಇಂಥಹ ಕಾನೂನು ಬಾಹೀರ ಧ್ವನಿವರ್ಧಕ ಅಳವಡಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಿತು.