ಕ್ರಮ ಮತಾಂತರಗಳು ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯ: ಉತ್ತರ ಪ್ರದೇಶದ ಕೋರ್ಟ್‌

| Published : Oct 03 2024, 01:19 AM IST / Updated: Oct 03 2024, 05:37 AM IST

ಸಾರಾಂಶ

‘ಅಕ್ರಮ ಮತಾಂತರಗಳು ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಗಮನಾರ್ಹ ಅಪಾಯ ಉಂಟುಮಾಡುತ್ತವೆ ಮತ್ತು ‘ಲವ್‌ ಜಿಹಾದ್‌’ನ ಮೂಲ ಉದ್ದೇಶವು ನಿರ್ದಿಷ್ಟ ಧರ್ಮವೊಂದರ ಸಮಾಜ ವಿರೋಧಿ ಶಕ್ತಿಗಳು ಪ್ರಾಬಲ್ಯ ಸ್ಥಾಪಿಸುವುದಾಗಿದೆ’ ಎಂದು ಉತ್ತರ ಪ್ರದೇಶದ ಕೋರ್ಟ್‌ ಒಂದು ಅಭಿಪ್ರಾಯಪಟ್ಟಿದೆ.

  ಬರೇಲಿ (ಉ.ಪ್ರ.) : ‘ಅಕ್ರಮ ಮತಾಂತರಗಳು ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗೆ ಗಮನಾರ್ಹ ಅಪಾಯ ಉಂಟುಮಾಡುತ್ತವೆ ಮತ್ತು ‘ಲವ್‌ ಜಿಹಾದ್‌’ನ ಮೂಲ ಉದ್ದೇಶವು ನಿರ್ದಿಷ್ಟ ಧರ್ಮವೊಂದರ ಸಮಾಜ ವಿರೋಧಿ ಶಕ್ತಿಗಳು ಪ್ರಾಬಲ್ಯ ಸ್ಥಾಪಿಸುವುದಾಗಿದೆ’ ಎಂದು ಉತ್ತರ ಪ್ರದೇಶದ ಕೋರ್ಟ್‌ ಒಂದು ಅಭಿಪ್ರಾಯಪಟ್ಟಿದೆ.

ಸುಳ್ಳು ಗುರುತು ನೀಡಿ ಮದುವೆ ಮಾಡಿಕೊಳ್ಳಲಾಗಿದೆ ಮತ್ತು ಗರ್ಭಪಾತ ಮಾಡಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ತ್ವರಿತ ಕೋರ್ಟ್‌ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರವಿಕುಮಾರ್‌ ದಿವಾಕರ್‌, ‘ಅಕ್ರಮ ಮತಾಂತರಕ್ಕಾಗಿ ಹಿಂದೂ ಹೆಣ್ಣುಮಕ್ಕಳಿಗೆ ಪ್ರೀತಿಯ ಆಮಿಷವೊಡ್ಡಲಾಗುತ್ತಿದೆ ಮತ್ತು ಭಾರತದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವಂತಹ ಪರಿಸ್ಥಿತಿಗಳನ್ನು ಸೃಷ್ಟಿಸಲಾಗುತ್ತಿದೆ. ಇದರಿಂದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ’ ಎಂದರು.

ಇದೇ ವೇಳೆ, ಸುಳ್ಳು ಗುರುತು ನೀಡಿ ಮದುವೆ ಆದ ಹಾಗೂ ಅತ್ಯಾಚಾರ ಆರೋಪ ಹೊತ್ತಿದ್ದ ಮೊಹಮ್ಮದ್‌ ಅಲೀಂ ಎಂಬಾತನಿಗೆ ಜೀವಾವಧಿ ಹಾಗೂ ಆತನ ತಂದೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದರು. ಉತ್ತರ ಪ್ರದೇಶದ ಅಲಿಂ ‘ಆನಂದ್‌’ ಎಂಬ ಹೆಸರು ಇಟ್ಟುಕೊಂಡು ಮಹಿಳೆಯೊಬ್ಬಳಿಗೆ ಮೋಸ ಮಾಡಿದ್ದ.ಈ ಬಗ್ಗೆ ತೀರ್ಪಿನಲ್ಲಿ ಕೆಲವು ವಿಷಯ ಉ್ಲಲೇಖಿಸಿದ ಜಡ್ಜ್, ‘ಮಾನಸಿಕ ಒತ್ತಡ ಮತ್ತು ಮದುವೆ ಮತ್ತು ಉದ್ಯೋಗದಂತಹ ಪ್ರಚೋದನೆಗಳ ಮೂಲಕ ಮತಾಂತರಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ವಿದೇಶದಿಂದ ಹಣ ಬರುವ ಅನುಮಾನವಿದೆ.ಸಮಸ್ಯೆಯನ್ನು ಸಮಯಕ್ಕೆ ಪರಿಹರಿಸದಿದ್ದರೆ, ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು‘ ಎಂದರು.

‘ಲವ್ ಜಿಹಾದ್ ಮೂಲಕ ಕಾನೂನುಬಾಹಿರ ಮತಾಂತರ ಹತ್ತಿಕ್ಕಲು ಉತ್ತರ ಪ್ರದೇಶ ಸರ್ಕಾರವು ಕಾಯ್ದೆ ಜಾರಿ ಮಾಡಿದೆ. ಸಂವಿಧಾನವು ಪ್ರತಿ ವ್ಯಕ್ತಿಗೂ ಅವರ ಧರ್ಮ ಆಚರಿಸಲು ಮತ್ತು ಪ್ರಚಾರ ಮಾಡಲು ಮೂಲಭೂತ ಹಕ್ಕು ನೀಡುತ್ತದೆ ಮತ್ತು ‘ಲವ್ ಜಿಹಾದ್’ ಮೂಲಕ ಕಾನೂನುಬಾಹಿರ ಮತಾಂತರಗಳ ಮೂಲಕ ಈ ವೈಯಕ್ತಿಕ ಸ್ವಾತಂತ್ರ್ಯವನ್ನು ರಾಜಿ ಮಾಡಿಕೊಳ್ಳಲಾಗದು’ ಎಂದು ಅಭಿಪ್ರಾಯಪಟ್ಟರು.