- ಭಾರತ-ಪಾಕ್ ಕದನ ನಿಲ್ಲಿಸಿದ್ದೇ ನಾನು
ವಾಷಿಂಗ್ಟನ್: ನಾನು ಭಾರತ ನಡುವಿನ ಪಾಕಿಸ್ತಾನ ಸಂಘರ್ಷವೂ ಸೇರಿ ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಜನ ನನ್ನನ್ನು ಮಹಾನ್ ಶಾಂತಿದೂತನಾಗಿ ಸ್ಮರಿಸಬೇಕೆನ್ನುವುದು ನನ್ನ ಬಯಕೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಂದೆಡೆ ಇರಾನ್ ಮೇಲೆ ಅಮೆರಿಕ ಅವ್ಯಾಹತ ದಾಳಿ ನಡೆಸಿದರೂ ಟ್ರಂಪ್ ಶಾಂತಿಯ ಮಾತು ಕುತೂಹಲ ಕೆರಳಿಸಿದೆ.ಮಿಯಾಮಿಯಲ್ಲಿ ಸೌದಿಅರೇಬಿಯಾ ಬೆಂಬಲಿತ ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನೀಷಿಯೇಟಿವ್‌ನಲ್ಲಿ ಮಾತನಾಡಿದ ಅವರು,
‘ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ಜನ ನನ್ನನ್ನು ಶಾಂತಿದೂತನಾಗಿ ಸ್ಮರಿಸಬೇಕೆಂಬುದು ನನ್ನ ಬಯಕೆ. ಯಾಕೆಂದರೆ ನಾನೊಬ್ಬ ಶಾಂತಿದೂತ ’ ಎಂದರು.ಇದೇ ವೇಳೆ ಭಾರತ-ಪಾಕಿಸ್ತಾನ ಯುದ್ಧವನ್ನು ಶೇ.250 ತೆರಿಗೆ ಹಾಕುವ ಬೆದರಿಕೆ ಮೂಲಕ ತಡೆದಿದ್ದಾಗಿ ಪುನರುಚ್ಚರಿಸಿರು.
+++
ಇರಾನ್ ಗೂಂಡಾಗಿರಿ:
47 ವರ್ಷಗಳ ಕಾಲ ಇರಾನ್ ಮಧ್ಯಪ್ರಾಚ್ಯದಲ್ಲಿ ಗೂಂಡಾಗಿರಿ ಮಾಡುತ್ತಿತ್ತು. ಇನ್ನು ಮುಂದೆ ಅವರು ಆ ರೀತಿ ಮಾಡಲು ಸಾಧ್ಯವಿಲ್ಲ. ಅವರ ನಾಯಕತ್ವ, ಸೇನೆ ಮತ್ತು ಅಣು ಯೋಜನೆ ತೀವ್ರ ಹಾನಿಗೊಳಗಾಗಿದೆ ಎಂದ ಅವರು, ಈ ವೇಳೆ ಯಾವುದೇ ಬೆಂಬಲ ನೀಡದ ನ್ಯಾಟೋ ವಿರುದ್ಧ ತೀವ್ರ ಹರಿಹಾಯ್ದರು. ನ್ಯಾಟೋ ಒಂದು ಕಾಗದದ ಹುಲಿ ಎಂದು ವ್ಯಂಗ್ಯವಾಡಿದರು.ಇರಾನ್ ಜತೆಗಿನ ಯಾವುದೇ ಒಪ್ಪಂದಕ್ಕೂ ಮೊದಲು ಹೊರ್ಮುಜ್ ಜಲಾಶಯವನ್ನು ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವುದು ಹಾಗೂ ತೈಲ ಹಡಗುಗಳ ಪುನರಾರಂಭಕ್ಕೆ ಅವಕಾಶ ನೀಡಬೇಕೆಂಬುದೇ ನನ್ನ ಮುಖ್ಯ ಷರತ್ತು ಎಂದು ಹೇಳಿದರು.