ಎಲ್ಲರ ಚಿತ್ತ ಇನ್ನು ಜೂ.4ರ ಫಲಿತಾಂಶದತ್ತ

| Published : Jun 02 2024, 01:46 AM IST / Updated: Jun 02 2024, 04:44 AM IST

ಸಾರಾಂಶ

ಲೋಕಸಭೆ ಚುನಾವಣೆಯ ಕಡೆಯ ಹಂತದ ಮತದಾನ ಮುಕ್ತಾಯ । ಶೇ.58ರಷ್ಟು ಮತದಾನಪಶ್ಚಿಮ ಬಂಗಾಳದಲ್ಲಿ ಅಲ್ಲಲ್ಲಿ ಹಿಂಸೆ ಹೊರತು ಉಳಿದೆಲ್ಲೆಡೆ ಬಹುತೇಕ ಶಾಂತಿಯುತ ಮತದಾನ.

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಎಲ್ಲಾ 7 ಹಂತದ ಮತದಾನ ಶನಿವಾರ ಮುಕ್ತಾಯವಾಗಿದೆ. ಶನಿವಾರ ನಡೆದ ಕಡೆಯ ಹಂತದಲ್ಲಿ ಶೇ.58ರಷ್ಟು ಮತದಾನವಾಗಿದೆ. ಇದರೊಂದಿಗೆ 18ನೇ ಲೋಕಸಭೆ ಆಯ್ಕೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಎಲ್ಲರ ಚಿತ್ರ ಜೂ.4ರಂದು ಪ್ರಕಟವಾಗುವ ಫಲಿತಾಂಶದ ಮೇಲೆ ನೆಟ್ಟಿದೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಹೊರತುಪಡಿಸಿ ಹಿಂದಿನ 6 ಹಂತಗಳಂತೆ ಈ ಹಂತದಲ್ಲೂ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಅಲ್ಲಲ್ಲಿ ಇವಿಎಂ ಕೈಕೊಟ್ಟ, ಮತಗಟ್ಟೆ ಅಪಹರಣ ಮೊದಲಾದ ಸಣ್ಣಪುಟ್ಟ ಘಟನೆಗಳು ನಡೆದವು.

ಕಡೆಯ ಹಂತದಲ್ಲಿ 8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭಾ ಕ್ಷೇತ್ರದಲ್ಲಿ 904 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಲೋಕಸಭೆಯ ಜೊತೆಗೆ ಒಡಿಶಾ ವಿಧಾನಸಭೆಯ 42 ಕ್ಷೇತ್ರಗಳಿಗೂ ಚುನಾವಣೆ ನಡೆಯಿತು.ಈ ಬಾರಿ ಚುನಾವಣೆಯಲ್ಲಿ 751 ನೊಂದಾಯಿತ ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿದ್ದಾರೆ. ಜೊತೆಗೆ 543 ಕ್ಷೇತ್ರಗಳಿಗೆ ಒಟ್ಟು 8,360 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ 443 ಮಂದಿಯ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳಿದ್ದರೆ, ರಾಜ್ಯ ಮಟ್ಟದ ಪಕ್ಷಗಳಲ್ಲಿ 249 ಮಂದಿಯ ಮೇಲೆ ಕ್ರಿಮಿನಲ್‌ ಪ್ರಕರಣಗಳಿವೆ. ಅಲ್ಲದೆ ಸ್ಥಳೀಯ ಪಕ್ಷಗಳ ಅಭ್ಯರ್ಥಿಗಳಲ್ಲಿ 401 ಮಂದಿಯ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಇನ್ನು ರಾಷ್ಟ್ರೀಯ ಪಕ್ಷಗಳಲ್ಲಿ 906 ಕೋಟ್ಯಧೀಶ ಅಭ್ಯರ್ಥಿಗಳಿದ್ದರೆ, ರಾಜ್ಯ ಮಟ್ಟದ ಪಕ್ಷಗಳಲ್ಲಿ 421 ಮಂದಿ ಕೋಟ್ಯಧೀಶ ಅಭ್ಯರ್ಥಿಗಳಿದ್ದಾರೆ.

 2024 ಶೇಕಡವಾರು ಮತದಾನ

ಹಂತ ಶೇಕಡವಾರು ಮತ166.14%

266.71%

365.68%

469.16%

562.20%

663.37%700.00

==

2019 ಶೇಕಡಾವಾರು ಮತಹಂತ 2024 20191 66.14 69.582 66.7 69.453 65.68 68.40

4 69.16 65.505 62.20 64.166 63.37 64.40

7 00.00 61.71ಒಟ್ಟು 67.40 00.00