ಮಧ್ಯಪ್ರದೇಶ ವಿಧಾನಸೌಧಕ್ಕೆ ಬೆಂಕಿ: ಯಾವುದೇ ಹಾನಿಯಿಲ್ಲ

| Published : Mar 10 2024, 01:33 AM IST

ಮಧ್ಯಪ್ರದೇಶ ವಿಧಾನಸೌಧಕ್ಕೆ ಬೆಂಕಿ: ಯಾವುದೇ ಹಾನಿಯಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯಪ್ರದೇಶದ ಸಚಿವಾಲಯಕ್ಕೆ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿ 5 ಗಂಟೆಯ ಪ್ರಯತ್ನದ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಇದೇ ರೀತಿ ಈ ಸಚಿವಾಲಯಕ್ಕೆ ಕಳೆದ ವರ್ಷವೂ ಹಲವು ಬಾರಿ ಬೆಂಕಿ ಬಿದ್ದಿತ್ತು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಭೋಪಾಲ್‌: ಮಧ್ಯಪ್ರದೇಶದ ಸಚಿವಾಲಯಕ್ಕೆ (ವಿಧಾನಸೌಧ) ಶನಿವಾರ ಬೆಂಕಿ ಬಿದ್ದಿದ್ದು, ಅಗ್ನಿಶಾಮಕ ಸಿಬ್ಬಂದಿಯ ಸತತ 5 ತಾಸು ಪರಿಶ್ರಮದಿಂದ ಬೆಂಕಿ ನಂದಿಸಲಾಗಿದೆ. ಅದೃಷ್ಟವಶಾತ್‌ ಈ ದುರ್ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಶನಿವಾರ ಬೆಳಗ್ಗೆ 9:30ರ ವೇಳೆಗೆ ಇಲ್ಲಿನ ವಲ್ಲಬ್‌ ಭವನದ 3ನೇ ಮಹಡಿಯಲ್ಲಿ ಹೊಗೆಯಾಡುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ, ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.ಈ ಘಟನೆ ಬಗ್ಗೆ ಮಾತನಾಡಿದ ರಾಜ್ಯ ವಿಪಕ್ಷ ನಾಯಕ ಉಮಂಗ್ ಸಾರಂಗ್‌, ಇದು ಭ್ರಷ್ಟಾಚಾರದ ದಾಖಲೆಗಳನ್ನು ಧ್ವಂಸಗೊಳಿಸಲು ಬಿಜೆಪಿ ನಡೆಸಿದ ಸಂಚು. 2033ರಿಂದ ಬಿಜೆಪಿ ಆಡಳಿತದಲ್ಲಿ 5 ಬಾರಿ ಬೆಂಕಿ ಹಚ್ಚಲಾಗಿದೆ. ಈ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.