ಗೌಪ್ಯವಾಗಿ ಐವರು ಮಹಿಳೆಯರ ಮದುವೆಯಾದ ವಿವಾಹಿತ ಸಾಫ್ಟ್‌ವೇರ್‌ ಎಂಜಿನಿಯರ್‌ : ಕುಟುಂಬ ಸದಸ್ಯರ ಬೆಂಬಲ

| Published : Sep 21 2024, 01:54 AM IST / Updated: Sep 21 2024, 06:59 AM IST

ಸಾರಾಂಶ

 ವಿವಾಹಿತ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬ, ವಿವಾಹದ ಬಳಿಕವೂ ಇತರೆ ಐವರು ಮಹಿಳೆಯರನ್ನು ಗೌಪ್ಯವಾಗಿ ವಿವಾಹವಾದ ಅಚ್ಚರಿ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

ಗ್ವಾಲಿಯರ್‌: ವಿವಾಹಿತ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬ, ವಿವಾಹದ ಬಳಿಕವೂ ಇತರೆ ಐವರು ಮಹಿಳೆಯರನ್ನು ಗೌಪ್ಯವಾಗಿ ವಿವಾಹವಾದ ಅಚ್ಚರಿ ಮತ್ತು ಆಘಾತಕಾರಿ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಇನ್ನೂ ಆತಂಕದ ವಿಷಯವೆಂದರೆ ಆತನ ಈ ಕೃತ್ಯಕ್ಕೆ ಆತನ ಕುಟುಂಬ ಸದಸ್ಯರೇ ಬೆಂಬಲವಾಗಿ ನಿಂತಿದ್ದಾರೆ.

ಸಿಂಗ್‌ ಶೇಖರ್‌ ಎಂಬಾತ 2018ರಲ್ಲಿ ಮಮತಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾದ ಬಳಿಕ ಸಿಂಗ್‌, ಕೆಲಸದ ಕಾರಣ ಹೇಳಿ ಪದೇ ಪದೇ ಸುದೀರ್ಘ ಅವಧಿಗೆ ಮನೆ ಬಿಟ್ಟು ಹೋಗುತ್ತಿದ್ದ. ಸಂಶಯ ಬಂದು ಮಮತಾ ಈ ಬಗ್ಗೆ ಪರಿಶೀಲಿಸಿದಾಗ ಪತಿ, ತಾನು ಅವಿವಾಹಿತ ಎಂದು ಹೇಳಿ ಇನ್ನೂ ಐವರು ಮಹಿಳೆಯರನ್ನು ಮದುವೆಯಾಗಿದ್ದ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಇದೀಗ ಮಮತಾ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಸಿಂಗ್‌, ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಮಮತಾ ದೂರಿರುವ ಹಿನ್ನೆಲೆಯಲ್ಲಿ ಶೇಖರ್‌ನ ಪಾಸ್ಪೋರ್ಟ್‌ ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆ ವೇಳೆ ಆತನ ಈ ಕೃತ್ಯಕ್ಕೆ ಆತನ ಕುಟುಂಬವೂ ಸಹಕರಿಸಿದ್ದು ಗೊತ್ತಾಗಿದೆ.