ಮಾದಿಗರಿಗೆ ಒಳಮೀಸಲು ಬೇಡಿಕೆ ಅಧ್ಯಯನಕ್ಕೆ ಸಮಿತಿ: ಮೋದಿ ಭಸವಸೆ

| Published : Nov 12 2023, 01:03 AM IST

ಸಾರಾಂಶ

ಹೈದರಾಬಾದ್‌: ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಚಾರದ ಭರಾಟೆ ತಾರಕಕ್ಕೇರಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ‘ಮಾದಿಗ ಒಳಮೀಸಲು’ ಬೇಡಿಕೆ ಈಡೇರಿಸಲು ಅಧ್ಯಯನ ಸಮಿತಿಯೊಂದನ್ನು ರಚಿಸುವ ಘೋಷಣೆ ಮಾಡಿದ್ದಾರೆ.

ಆಂಧ್ರದಲ್ಲಿನ ಮಾದಿಗ ಹೋರಾಟಗಾರರಿಗೆ ಆಶ್ವಾಸನೆಕರ್ನಾಟಕದಲ್ಲೂ ಇದೇ ಮಾದರಿಯ ಬೇಡಿಕೆ ಇದೆ

ಬೇಡಿಕೆ ಈಡೇರಿದರೆ ದೇಶದ ಎಲ್ಲೆಡೆಯ ಮಾದಿಗರಿಗೆ ಅನುಕೂಲ ಸಾಧ್ಯತೆಹೈದರಾಬಾದ್‌: ಪಂಚರಾಜ್ಯ ಚುನಾವಣೆಗಳಲ್ಲಿ ಪ್ರಚಾರದ ಭರಾಟೆ ತಾರಕಕ್ಕೇರಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ‘ಮಾದಿಗ ಒಳಮೀಸಲು’ ಬೇಡಿಕೆ ಈಡೇರಿಸಲು ಅಧ್ಯಯನ ಸಮಿತಿಯೊಂದನ್ನು ರಚಿಸುವ ಘೋಷಣೆ ಮಾಡಿದ್ದಾರೆ. ಮಾದಿಗ ಒಳಮೀಸಲಿಗೆ ತೆಲಂಗಾಣ ಹಾಗೂ ಕರ್ನಾಟಕ ಸೇರಿ ಅನೇಕ ಕಡೆ ಬೇಡಿಕೆ ಇದೆ. ಹೀಗಾಗಿ ಮೋದಿ ಅವರ ಭರವಸೆ ಈಡೇರಿದರೆ ದೇಶವ್ಯಾಪಿ ಪರಿಣಾಮ ಬೀರಲಿದೆ.ಸಿಕಂದರಾಬಾದ್‌ನಲ್ಲಿ ನಡೆದ ಮಾದಿಗ ಮೀಸಲು ಹೋರಾಟ ಸಮಿತಿ ರ್‍ಯಾಲಿಯಲ್ಲಿ ಮಾತನಾಡಿದ ಮೋದಿ, ‘ಮಾದಿಗರು ಒಳಮೀಸಲಿಗೆ ಅನೇಕ ವರ್ಷಗಳಿಂದ ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟಲ್ಲೂ ಈ ಬಗ್ಗೆ ಕೇಸುಗಳಿವೆ. ಆದರೆ ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ನಿಂದ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅವು ದಲಿತ ವಿರೋಧಿ ಪಕ್ಷಗಳು. ನಾನು ನಿಮ್ಮಿಂದ ಏನನ್ನೂ ಕೇಳಲು ಇಲ್ಲಿಗೆ ಬಂದಿಲ್ಲ, ಸ್ವಾತಂತ್ರ್ಯದ ನಂತರ ನಿಮ್ಮನ್ನು ವಂಚಿಸಿದ ಎಲ್ಲಾ ಆ ರಾಜಕೀಯ ಪಕ್ಷಗಳ ತಪ್ಪಿಗೆ ಕ್ಷಮೆ ಕೇಳಲು ಬಂದಿದ್ದೇನೆ. ‘ಮಾದಿಗ ಒಳಮೀಸಲು’ ಬೇಡಿಕೆ ಈಡೇರಿಸಲು ಅಧ್ಯಯನ ಸಮಿತಿ ರಚಿಸಲಾಗುತ್ತದೆ’ ಎಂದು ಘೋಷಿಸಿದರು.ಮಾದಿಗ ಹೋರಾಟಗಾರನನ್ನು ಬಿಗಿದಪ್ಪಿದ ಮೋದಿತೆಲಂಗಾಣ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಖಂಡ ಮಂದ ಕೃಷ್ಣ ಮಾದಿಗ ಅವರೊಂದಿಗೆ ಪ್ರಧಾನಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಆಗ ಕೃಷ್ಣ ಅವರು, ‘ಈವರೆಗೂ ಯಾವುದೇ ಪ್ರಧಾನಿ, ಮಾದಿಗರ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ’ ಎಂದು ಭಾವುಕರಾಗಿ ಕೈಮುಗಿದು ಎದ್ದು ನಿಂತರು. ಆಗ ಕೃಷ್ಣರನ್ನು ಮೋದಿ ತಬ್ಬಿ ‘ಸೋದರ ಕೃಷ್ಣ, ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಸಾಂತ್ವನ ಹೇಳಿದರು.ಒಳಮೀಸಲು: ಮಾದಿಗರ ಅನೇಕ ದಶಕದ ಬೇಡಿಕೆಪರಿಶಿಷ್ಟ ಜಾತಿಗಳಲ್ಲೇ ಇನ್ನೂ ಅನೇಕ ಸಮುದಾಯಗಳಿವೆ. ಮಾದಿಗರು ದಲಿತ ಸಮುದಾಯವಾಗಿದ್ದು, ಅವರು ಐತಿಹಾಸಿಕವಾಗಿ ಚರ್ಮದ ಕೆಲಸಗಾರರಾಗಿ ಮತ್ತು ಮಲ ಹೊರುವ ಕೆಲಸ ಮಾಡಿದ್ದಾರೆ. ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳ ದೊಡ್ಡ ಘಟಕಗಳಲ್ಲಿ ಮಾದಿಗರು ಪ್ರಮುಖರು. ಹೀಗಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ತೆಲಂಗಾಣದಲ್ಲಿ 3 ದಶಕಗಳಿಂದ ಪರಿಶಿಷ್ಟ ಜಾತಿಗೆ ಮೀಸಲು ಉಪವರ್ಗೀಕರಣಕ್ಕೆ (ಒಳಮೀಸಲಿಗೆ) ಒತ್ತಾಯಿಸುತ್ತಿದೆ.ಕರ್ನಾಟಕದಲ್ಲೂ ಮಾದಿಗ ಸಮುದಾಯ ಇಂಥದ್ದೇ ಒಳಮೀಸಲಿಗೆ ಆಗ್ರಹಿಸುತ್ತಿದೆ. ಈಗ ಮೋದಿ ಅವರು ಈ ಸಮುದಾಯಕ್ಕೆ ಒಳ ಮೀಸಲು ಭರವಸೆ ನೀಡಿರುವ ಕಾರಣ, ಇದು ದೇಶವ್ಯಾಪಿ ಪರಿಣಾಮ ಬೀರುವ ಸಾಧ್ಯತೆ ಇದೆ.