ರಸ್ತೆಯಲ್ಲಿ ಬಟ್ಟೆ ಸುತ್ತಿಟ್ಟ ಎಲ್ಲಾ ಕಲ್ಲೂ ವಿಗ್ರಹವಲ್ಲ: ಹೈಕೋರ್ಟ್‌

| Published : Feb 07 2024, 01:45 AM IST / Updated: Feb 07 2024, 11:32 AM IST

ಸಾರಾಂಶ

ಸಮಾಜದ ಮೂಢನಂಬಿಕೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಮದ್ರಾಸ್‌ ಹೈಕೋರ್ಟ್ ‘ರಸ್ತೆಯಲ್ಲಿ ಬಟ್ಟೆ ಹೊದಿಸಿ ಪೂಜಿಸುವ ಪ್ರತಿ ಕಲ್ಲನ್ನೂ ವಿಗ್ರಹ ಅಥವಾ ದೇವರೆಂದು ಪರಿಗಣಿಸಬಾರದು’ ಎಂದು ಹೇಳಿದೆ.

ಚೆನ್ನೈ: ಸಮಾಜದ ಮೂಢನಂಬಿಕೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಮದ್ರಾಸ್‌ ಹೈಕೋರ್ಟ್ ‘ರಸ್ತೆಯಲ್ಲಿ ಬಟ್ಟೆ ಹೊದಿಸಿ ಪೂಜಿಸುವ ಪ್ರತಿ ಕಲ್ಲನ್ನೂ ವಿಗ್ರಹ ಅಥವಾ ದೇವರೆಂದು ಪರಿಗಣಿಸಬಾರದು’ ಎಂದು ಹೇಳಿದೆ.

ತಮಿಳುನಾಡಿನ ಪಲ್ಲಾವರಂನ ನಿವಾಸಿ ಶಕ್ತಿ ಮುರುಗನ್‌ ಎಂಬುವರ ಜಮೀನಿನಲ್ಲಿ ಹಸಿರು ಬಣ್ಣದ ಬಟ್ಟೆ ಸುತ್ತಿರುವ ಕಲ್ಲೊಂದನ್ನು ಇರಿಸಲಾಗಿದೆ.

ಇದು ಕೇವಲ ಕಲ್ಲು. ವಿಗ್ರಹವಲ್ಲ ಎಂದು ಅದನ್ನು ತೆರವು ಮಾಡಲು ಮುರುಗನ್‌ ಮುಂದಾಗಿದ್ದಾರೆ. ಆದರೆ ಅದು ಕೇವಲ ಕಲ್ಲಲ್ಲ, ವಿಗ್ರಹ ಎಂದು ಸ್ಥಳೀಯ ಕೆಲವರು ಅರ್ಜಿ ಸಲ್ಲಿಸಿದ್ದಾರೆ. 

ಕಲ್ಲು ತೆರವಿಗೆ ಮುರುಗನ್‌ ರಕ್ಷಣೆ ಕೋರಿದ್ದ ಅರ್ಜಿ ವಿಚಾರಣೆ ವೇಳೆ ಕೋರ್ಟ್ ‘ಕಾಲ ಕಳೆದರೂ ಸಮಾಜ ವಿಕಸನಗೊಳ್ಳುತ್ತಿಲ್ಲ, ಮೂಢನಂಬಿಕೆಗಳನ್ನು ಬಿಡುತ್ತಿಲ್ಲ. 

ಇಂತಹ ಪ್ರಕರಣಗಳು ನ್ಯಾಯಾಲಯದ ಸಮಯ ವ್ಯರ್ಥ ಮಾಡುತ್ತವೆ’ ಎಂದಿದೆ. ಅಲ್ಲದೇ ಕಲ್ಲು ತೆರವಿಗೆ ಮುರುಗನ್‌ಗೆ ಸಹಾಯ ಮಾಡಲು ಪೊಲೀಸರಿಗೆ ಸೂಚಿಸಿದೆ.