ಸಾರಾಂಶ
25 ಸೀಟುಗಳ ಹಂಚಿಕೆಗೆ ಎನ್‌ಸಿಪಿ- ಕಾಂಗ್ರೆಸ್ ನಡುವೆ ಸೆಣಸು ನಡೆಸಲಿ. ಮಿಕ್ಕ 23 ಸೀಟುಗಳನ್ನು ಉದ್ಧವ್ ಬಣ ತಮಗೆ ಬಿಟ್ಟುಕೊಡಿ ಎಂದು ಬಿಗಿಪಟ್ಟು ಹಿಡಿದಿದ್ದು, ಮೈತ್ರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ನಾಸಿಕ್: ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಬಿಕ್ಕಟ್ಟು ಪಶ್ಚಿಮ ಬಂಗಾಳ, ಪಂಜಾಬ್, ಬಿಹಾರದ ಬಳಿಕ ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಪಾಲಿಗೆ ಸಂಕಷ್ಟ ತಂದಿಡುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ 48ರ ಪೈಕಿ ತಾನು ಸ್ಪರ್ಧಿಸಿದ್ದ 23 ಸ್ಥಾನಗಳಲ್ಲಿ ಈ ಬಾರಿಯೂ ತಾನು ಸ್ಪರ್ಧಿಸಿಯೇ ತೀರುವುದಾಗಿ ಉದ್ಧವ್ ಬಣದ ಶಿವಸೇನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.ಈ ಮೂಲಕ ಕಾಂಗ್ರೆಸ್ ಬೇಕಿದ್ದರೆ, ಎನ್‌ಸಿಪಿ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಸಲಿ ಎಂದು ಪರೋಕ್ಷವಾಗಿ ಸೂಚಿಸಿದೆ.
ಕಳೆದ ಬಾರಿ ಕಾಂಗ್ರೆಸ್ 26 ಮತ್ತು ಎನ್‌ಸಿಪಿ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.ಆದರೆ ಈ ಬಾರಿ 48ರ ಪೈಕಿ 23 ತನಗೆ ಬೇಕೆಂದು ಉದ್ಧವ್ ಬಣ ಪಟ್ಟು ಹಿಡಿದಿದೆ. ಹೀಗಾಗಿ ಉಳಿದ 25 ಸೀಟುಗಳನ್ನು ಕಾಂಗ್ರೆಸ್ ಮತ್ತು ಎನ್‌ಸಿಪಿ ಹಂಚಿಕೊಳ್ಳಬೇಕಿದೆ.