ಸಾರಾಂಶ
ಮಹಾರಾಷ್ಟ್ರ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಪುಣೆ: ಮಹಾರಾಷ್ಟ್ರ ಸರ್ಕಾರ ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಕರು ಇನ್ನು ಮುಂದೆಕರ್ತವ್ಯದ ವೇಳೆ ಯಾವುದೇ ಟಿ-ಶರ್ಟ್, ಜೀನ್ಸ್ ಪ್ಯಾಂಟ್ ಹಾಗೂ ವಿಚಿತ್ರ ವಿನ್ಯಾಸದ ಚಿತ್ರಗಳನ್ನು ಹೊಂದಿರುವ ಶರ್ಟ್ ಧರಿಸುವಂತಿಲ್ಲ ಎಂದು ಹೇಳಿದೆ.
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಮಹಿಳಾ ಶಿಕ್ಷಕರು ಸೀರೆ, ಸಲ್ವಾರ್, ಚೂಡಿದಾರ್, ಕುರ್ತಾವನ್ನು ಹಾಗೂ ಪುರುಷ ಶಿಕ್ಷಕರು ಟಕ್‌ಇನ್ ರೀತಿಯಲ್ಲಿ ಪ್ಯಾಂಟ್ ಹಾಗೂ ಶರ್ಟ್ ಧರಿಸಬಹುದು ಎಂದು ತಿಳಿಸಿದೆ.
ಈ ವಸ್ತ್ರ ಸಂಹಿತೆ ರಾಜ್ಯದ ಖಾಸಗಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿದಂತೆ ಎಲ್ಲಾ ಶಾಲೆಗಳಿಗೂ ಅನ್ವಯಿಸುತ್ತದೆ ಎಂದು ಸರ್ಕಾರ ತಿಳಿಸಿದೆ.