ಅಧಿಕೃತ ನಿವಾಸದಲ್ಲೇ ಕೃತ್ಯ । ಸಚಿವ ಸ್ಥಾನದಿಂದ ವಜಾಗೆ ಕಾಂಗ್ರೆಸ್ ಆಗ್ರಹಮುಂಬೈ: ಮಹಾರಾಷ್ಟ್ರ ಸಚಿವ ನರಹರಿ ಜೀರ್ವಾಲ್ ಸರ್ಕಾರದ ಅಧಿಕೃತ ನಿವಾಸದಲ್ಲಿ ತೃತೀಯ ಲಿಂಗಿಯೊಬ್ಬರ ಜೊತೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.
ಆಹಾರ ಮತ್ತು ಔಷಧ ಆಡಳಿತ ಸಚಿವ ಜೀರ್ವಾಲ್ ಕೋಣೆಯ ಮಂಚದ ಮೇಲೆ ಮಲಗಿರುವುದು, ತೃತೀಯ ಲಿಂಗಿ ಆತನ ಸುತ್ತಮುತ್ತ ಸುಳಿದಾಡುವುದು, ನಂತರ ಇಬ್ಬರೂ ಅಕ್ಕಪಕ್ಕ ಮಲಗುವುದು ಸೇರಿದಂತೆ ಕೆಲವು ಖಾಸಗಿ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಅಲ್ಲಿಯೇ ಇದ್ದ ತೃತೀಯ ಲಿಂಗಿಯ ಸಹೋದರ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್, ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ‘ಜೀರ್ವಾಲ್ ನಡೆ ಮಹಾರಾಷ್ಟ್ರ ರಾಜಕೀಯಕ್ಕೆ ಅವಮಾನ. ಸರ್ಕಾರ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದೆ.