ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

| Published : Jan 16 2024, 01:49 AM IST / Updated: Jan 16 2024, 11:36 AM IST

ಸಾರಾಂಶ

ಅಯ್ಯಪ್ಪನ ದಿವ್ಯ ಸನ್ನಿಧಿ ಶಬರಿಮಲೆಯಲ್ಲಿ ಸಂಪ್ರದಾಯದಂತೆ ಈ ಬಾರಿಯೂ ಮಕರ ಸಂಕ್ರಾಂತಿ ದಿನದ ಸೂರ್ಯಾಸ್ತದ ಸಮಯದಲ್ಲಿ ಮಕರಜ್ಯೋತಿ ದರ್ಶನವಾಗಿದೆ.

ಶಬರಿಮಲೆ: ಪ್ರತಿವರ್ಷದಂತೆ ಈ ಬಾರಿಯೂ ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿಧಿ ಬಳಿ ಮಕರ ಸಂಕ್ರಾಂತಿ ದಿನದಂದು ‘ಮಕರ ಜ್ಯೋತಿ’ ದರ್ಶನವಾಗಿದೆ.

ಸೋಮವಾರ ಸಂಜೆ 6 ಗಂಟೆ ಬಳಿಕ ಮಕರ ಜ್ಯೋತಿ ದರ್ಶನವಾಗಿದೆ. ಈ ವೇಳೆ ಜ್ಯೋತಿಯನ್ನು ನೋಡಲೆಂದು ನೆರೆದಿದ್ದ ಲಕ್ಷಾಂತರ ಭಕ್ತಾದಿಗಳು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಉದ್ಘರಿಸಿದರು.

ಸ್ವತಃ ಅಯ್ಯಪ್ಪ ಸ್ವಾಮಿಯೇ ಸಂಕ್ರಾಂತಿ ದಿನದಂದು ಜ್ಯೋತಿಯ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ ಎಂದು ನಂಬಲಾಗಿದೆ.