ಪಿಂಚಣಿ ಅದಾಲತ್‌ ಸದುಪಯೋಗಪಡಿಸಿಕೊಳ್ಳಿ : ನಾಡಕಚೇರಿ ಉಪ ತಹಸೀಲ್ದಾರ್ ಓ.ಶ್ರೀನಿವಾಸ್

| Published : Dec 21 2024, 01:15 AM IST / Updated: Dec 21 2024, 04:49 AM IST

ಸಾರಾಂಶ

ಪಿಂಚಣಿ ವಂಚಿತ ಫಲಾನುಭವಿಗಳ ಮನೆ ಬಾಗಿಲಿಗೆ ಆದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂದಾಯ ಇಲಾಖೆ ಕೆಲಸ ಮಾಡುತ್ತಿದ್ದು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಿ ಎಂದು ಹುಲಿಕುಂಟೆ ಹೋಬಳಿ ನಾಡಕಚೇರಿ ಉಪ ತಹಸೀಲ್ದಾರ್ ಓ.ಶ್ರೀನಿವಾಸ್ ತಿಳಿಸಿದರು. 

 ಶಿರಾ  : ಸರಕಾರದ ಆದೇಶದ ಮೇರೆಗೆ ಪಿಂಚಣಿ ವಂಚಿತ ಫಲಾನುಭವಿಗಳ ಮನೆ ಬಾಗಿಲಿಗೆ ಆದೇಶ ಪತ್ರ ವಿತರಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂದಾಯ ಇಲಾಖೆ ಕೆಲಸ ಮಾಡುತ್ತಿದ್ದು ಫಲಾನುಭವಿಗಳು ಇದರ ಉಪಯೋಗ ಪಡೆದುಕೊಳ್ಳಿ ಎಂದು ಹುಲಿಕುಂಟೆ ಹೋಬಳಿ ನಾಡಕಚೇರಿ ಉಪ ತಹಸೀಲ್ದಾರ್ ಓ.ಶ್ರೀನಿವಾಸ್ ತಿಳಿಸಿದರು

ಅವರು ತಾಲೂಕು ಹುಲಿಕುಂಟೆ ಹೋಬಳಿ ಬರಗೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. 

ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಉಳಿದಿರುವ ಪಿಂಚಣಿ ವಂಚಿತ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಆದೇಶ ಪತ್ರವನ್ನು ನೀಡುತ್ತಿದ್ದು, 60 ವರ್ಷ ವಯಸ್ಸಿನವರಿಗೆ ವೃದ್ಧಾಪ್ಯ ವೇತನ 65 ವರ್ಷ ಇವರಿಗೆ ಸಂಧ್ಯಾ ಸುರಕ್ಷಾ ಯೋಜನೆ ಸಮರ್ಪಕವಾಗಿ ಫಲಾನುಭವಿಗಳಿಗೆ ನೆರವಾಗಲಿದೆ. ಅರ್ಹ ಫಲಾನುಭವಿಗಳು ಅಧಿಕಾರಿಗಳನ್ನು ಸಂಪರ್ಕಿಸಿ ಸೌಲಭ್ಯಗಳನ್ನು ಪಡೆಯುವಂತೆ ತಿಳಿಸಿದರು. 

ಕಾರ್ಯಕ್ರಮದಲ್ಲಿ 19 ಮಂದಿ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಭೀಮಣ್ಣ, ಸದಸ್ಯರಾದ ಕಂಬಿ ಮಂಜುನಾಥ್, ರಾಘವೇಂದ್ರ, ಲೋಕೇಶ್, ಲಕ್ಷ್ಮಣ ಜಯರಾಮಯ್ಯ, ಸಿದ್ದಯ್ಯ, ರಾಜು, ರಮೇಶ್, ಜಯರಾಮಯ್ಯ, ಬಾಲಕೃಷ್ಣ, ಗ್ರಾಮ ಲೆಕ್ಕಾಧಿಕಾರಿ ಸಿ. ಜಗದೀಶ್, ಹರೀಶ್, ನರೇಂದ್ರಪ್ಪ ಮತ್ತು ಗ್ರಾಮ ಸಹಾಯಕರಾದ ನರಸಿಂಹರಾಜು, ಹಂಸವೇಣಿ , ಅಂಬುಜಾಕ್ಷಿ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಪುಟ್ಟರಾಜು , ರಘು ಹಾಗೂ ಫಲಾನುಭವಿಗಳು ಗ್ರಾಮಸ್ಥರು ಇದ್ದರು.