ವಿಮಾನದ ಟಾಯ್ಲೆಟ್‌ನಲ್ಲಿ ಬೀಡಿ ಸೇದಿದವನ ಬಂಧನ

| Published : Mar 07 2024, 01:49 AM IST / Updated: Mar 07 2024, 02:27 PM IST

ಸಾರಾಂಶ

ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.

ಮುಂಬೈ: ಶ್ರೀಮಂತರೆಲ್ಲಾ ಸಿಗರೇಟ್‌ ಮಾತ್ರ ಸೇದೋದು ಅನ್ನೋರು ಇಲ್ಲಿ ಕೇಳಿ.

ದೆಹಲಿಯಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದ ಪ್ರಯಾಣಿಕನೊಬ್ಬ ಬೀಡಿ ಸೇರಿ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ.

ಬುಧವಾರ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.

ಪ್ರಯಾಣಿಕ ಶೌಚಾಲಯದ ಒಳಗೆ ಹೋಗಿ ಬೀಡಿ ಸೇದಿದ್ದನೆ. ಹೀಗಾಗಿ ವಿಮಾನ ಪೂರ್ತಿ ಬೀಡಿ ಹೊಗೆ ಆವರಿಸಿ, ಪ್ರಯಾಣಿಕರಲ್ಲಿ ಆತಂಕ ತಲೆ ಎತ್ತಿತ್ತು.

ಬಳಿಕ ಸಿಬ್ಬಂದಿ ತಪಾಸಣೆ ಮಾಡಿದ ಬಳಿಕ ಬೀಡಿ ಸೇದಿದ್ದು ತಾನೇ ಎಂದು ಪ್ರಯಾಣಿಕ ಒಪ್ಪಿಕೊಂಡಿದ್ದಾನೆ, ಲೈಟರ್‌ನನ್ನು ಸಿಬ್ಬಂದಿಗೆ ಹಸ್ತಾಂತರಿಸಿದ್ದಾನೆ. ಈತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.