ಪತ್ನಿ ಶೀಲ ಶಂಕಿಸಿ ಗುಪ್ತಾಂಗಕ್ಕೆ ಬೀಗ ಹಾಕಿದ ಪತಿ

| Published : May 20 2024, 01:31 AM IST / Updated: May 20 2024, 07:03 AM IST

ಸಾರಾಂಶ

ತನ್ನ ಪತ್ನಿಯ ಶೀಲವನ್ನು ಶಂಕಿಸಿದ ಪತಿ ಆಕೆಯ ಗುಪ್ತಾಂಗಕ್ಕೆ ಬೀಗ ಹಾಕಿದ ಅಮಾನವೀಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಪತಿಯಿಂದ ಇಂಥ ಕ್ರೌರ್ಯಕ್ಕೆ ಒಳಗಾದ ಮಹಿಳೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮುಂಬೈ: ತನ್ನ ಪತ್ನಿಯ ಶೀಲವನ್ನು ಶಂಕಿಸಿದ ಪತಿ ಆಕೆಯ ಗುಪ್ತಾಂಗಕ್ಕೆ ಬೀಗ ಹಾಕಿದ ಅಮಾನವೀಯ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಪತಿಯಿಂದ ಇಂಥ ಕ್ರೌರ್ಯಕ್ಕೆ ಒಳಗಾದ ಮಹಿಳೆಯನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಹಿನ್ನೆಲೆ:  ನೇಪಾಳ ಮೂಲದ ವ್ಯಕ್ತಿ ಪಿಂಪ್ರಿ- ಚಿಂಚ್ವಾಡ್‌ನ ವಸತಿ ಸಮುಚ್ಛಯವೊಂದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತನಿಗೆ ಇತ್ತೀಚೆಗೆ ಪತ್ನಿ ಶೀಲದ ಮೇಲೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೇ 11ರಂದು ಪತ್ನಿಯ ಗುಪ್ತಾಂಗದ ಅಕ್ಕಪಕ್ಕದ ಜಾಗವನ್ನು ಬ್ಲೇಡ್‌ನಿಂದ ಕತ್ತರಿಸಿ ಅದರಲ್ಲಿ ಮೊಳೆ ಸೇರಿಸಿದ್ದಾನೆ. ಬಳಿಕ ಎರಡೂ ಮೊಳೆಗಳನ್ನು ಜೋಡಿಸಿ ಅದಕ್ಕೆ ತಾಮ್ರದ ಬೀಗ ಹಾಕಿದ್ದಾನೆ.

ಕೃತ್ಯದ ವೇಳೆ ಮಹಿಳೆಯ ಕೈಕಾಲು ಕಟ್ಟಿಹಾಕಿದ್ದ ಕಾರಣ ಆಕೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ರೌರ್ಯದ ವೇಳೆ ಆಕೆ ಕಿರುಚಿದರೂ ಆತ ಬಿಡದೇ ಕೃತ್ಯ ಮುಂದುವರೆಸಿದ್ದಾನೆ. ಬಳಿಕ ಆಕೆ ಚೇತರಿಸಿಕೊಂಡು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಬಳಿಕ ಆರೊಪಿ ನಾಪತ್ತೆಯಾಗಿದ್ದಾನೆ.