ಮೇರಠ್‌ನಲ್ಲೊಂದು ವಂಚನೆ : ಹುಡುಗಿ ತೋರಿಸಿ ಆಕೆ ಅಮ್ಮನ ಜೊತೆಗೆ ಮದ್ವೆ ! ಮುಸುಕು ತೆಗೆದ ಮದು ಮಗನಿಗೆ ಶಾಕ್‌

| N/A | Published : Apr 20 2025, 01:51 AM IST / Updated: Apr 20 2025, 04:26 AM IST

ಮೇರಠ್‌ನಲ್ಲೊಂದು ವಂಚನೆ : ಹುಡುಗಿ ತೋರಿಸಿ ಆಕೆ ಅಮ್ಮನ ಜೊತೆಗೆ ಮದ್ವೆ ! ಮುಸುಕು ತೆಗೆದ ಮದು ಮಗನಿಗೆ ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಮಾತನ್ನು ನಿಜಮಾಡಲೋ ಎಂಬಂತಿರುವ ಘಟನೆಯೊಂದು ಉತ್ತರಪ್ರದೇಶದ ಮೇರಠ್‌ನಲ್ಲಿ ನಡೆದಿದೆ.

ಮೇರಠ್‌: ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಮಾತನ್ನು ನಿಜಮಾಡಲೋ ಎಂಬಂತಿರುವ ಘಟನೆಯೊಂದು ಉತ್ತರಪ್ರದೇಶದ ಮೇರಠ್‌ನಲ್ಲಿ ನಡೆದಿದೆ.

ಮೊಹಮ್ಮದ್‌ ಅಜೀಂ ಎಂಬ 22 ವರ್ಷದ ಬ್ರಹ್ಮಪುರಿ ನಿವಾಸಿ ಯುವಕನ ಮದುವೆಯನ್ನು ಅವನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ, ಶಾಮ್ಲಿ ಜಿಲ್ಲೆಯ ಮನ್ತಾಶಾ ಎಂಬ ಯುವತಿಯೊಂದಿಗೆ ನಿಗದಿಪಡಿಸಿದ್ದರು. ಅದರಂತೆ ಮಾ.31ರಂದು ಮದುವೆಯೂ ನಡೆಯಿತು. ಈ ವೇಳೆ, ಸಂಪ್ರಾದಾಯದಂತೆ ಮೌಲ್ವಿ ಹುಡುಗಿಯ ಹೆಸರನ್ನು ತಾಹಿರಾ ಎಂದು ಹೇಳಿದಾಗ ಅಜೀಂ ಅವಾಕ್ಕಾಗಿದ್ದಾನೆ. ಬಳಿಕ ಆಕೆಯ ಮುಸುಕು ತೆಗೆದಾಗ 21 ವರ್ಷದ ಯುವತಿಯ ಬದಲು, ವಧುವಿನ ಉಡುಗೆಯಲ್ಲಿದ್ದ ಆಕೆಯ 45 ವರ್ಷದ ತಾಯಿಯ ದರ್ಶನವಾಗಿದೆ. ಹೀಗೆ, ತಾನು ವರಿಸಿದ್ದು ವಧುವಿನ ತಾಯಿಯನ್ನು ಎಂದು ತಿಳಿದು ಮದುಮಗ ಕಕ್ಕಾಬಿಕ್ಕಿಯಾಗಿದ್ದಾನೆ.

ತನಗಾದ ವಂಚನೆಯ ವಿರುದ್ಧ ಅಜೀಂ ಪ್ರತಿಭಟಿಸಿದಾಗ, ಆತನ ಮೇಲೆ ಸುಳ್ಳು ಅತ್ಯಾಚಾರದ ಆರೋಪ ಹೊರಿಸುವುದಾಗಿ ನದೀಂ ಮತ್ತು ಶೈದಾ ಬೆದರಿಸಿದ್ದಾರೆ. ಆದರೂ ಅಜೀಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ‘ವಧುವಿನ ಕುಟುಂಬಕ್ಕೆ 5 ಲಕ್ಷ ರು.ವನ್ನೂ ಕೊಡಲಾಗಿತ್ತು’ ಎಂದು ಆರೋಪಿಸಿದ್ದಾನೆ.

ಪ್ರಕರಣದ ಕುರಿತು ಮಾತನಾಡಿದ ಬ್ರಹ್ಮಪುರಿಯ ಸಿಇಒ ಸೌಮ್ಯಾ ಆಸ್ಥಾನಾ, ‘ವಧು-ವರರ ಕುಟುಂಬಗಳು ಇತ್ಯರ್ಥ ಮಾಡಿಕೊಂಡಿದ್ದು, ತಾನು ಕಾನೂನು ಕ್ರಮ ಬಯಸುವುದಿಲ್ಲ ಎಂದು ಹೇಳಿ ಅಜೀಂ ದೂರನ್ನು ಹಿಂಪಡೆದಿದ್ದಾನೆ’ ಎಂದು ತಿಳಿಸಿದ್ದಾರೆ.