ಪ್ರಯಾಗ್‌ರಾಜ್‌: ಶಾಂತಿ ಕೋರಿ ತ್ರಿವೇಣಿ ಸಂಗಮದಲ್ಲಿ ಮಣಿಪುರ ಸಿಎಂ ಬಿರೇನ್ ಸಿಂಗ್ ಸ್ನಾನ

| N/A | Published : Feb 08 2025, 12:30 AM IST / Updated: Feb 08 2025, 07:54 AM IST

ಸಾರಾಂಶ

ಮಣಿಪುರ ಸಿಎಂ ಬಿರೇನ್ ಸಿಂಗ್ ಅವರು ಸಚಿವ ಸಂಪುಟದ ಕೆಲ ಸಚಿವರು ಹಾಗೂ ಶಾಸಕರ ಜೊತೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಪ್ರಯಾಗ್‌ರಾಜ್‌: ಮಣಿಪುರ ಸಿಎಂ ಬಿರೇನ್ ಸಿಂಗ್ ಅವರು ಸಚಿವ ಸಂಪುಟದ ಕೆಲ ಸಚಿವರು ಹಾಗೂ ಶಾಸಕರ ಜೊತೆಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. 

ಪುಣ್ಯ ಸ್ನಾನದ ಬಳಿಕ ಸಾಮಾಜಿಕ ಜಾಲತಾಣ ಖಾತೆ ಎಕ್ಸ್‌ನಲ್ಲಿ ಫೋಟೋ ಹಂಚಿಕೊಂಡಿರುವ ಸಿಎಂ ಬಿರೇನ್ ಸಿಂಗ್ ‘ ಗಂಗಾ, ಯಮುನಾ, ಸರಸ್ವತಿಯ ಸಂಗಮ ಸ್ಥಾನದಲ್ಲಿ ನಿಂತಾಗ ದೈವಿಕ ಅನುಭವ ಪಡೆಯಬಹುದು. ತಂಪಾದ ನೀರು ದೇಹ ಹೊಕ್ಕಾಗ ಧೂಳುಗಳನ್ನು ತೆಗೆದು ಹಾಕುವುದು ಮಾತ್ರವಲ್ಲದೇ, ದೇಹದ ಹೊರೆಗಳನ್ನು ತೊಳೆಯುತ್ತದೆ. ದೇಶ ಮತ್ತು ಮಣಿಪುರದ ಜನರ ಶಾಂತಿ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.