ಮಣಿಪುರ ಮತ್ತೆ ಉದ್ವಿಗ್ನ:ಉಗ್ರಗಾಮಿಗಳ ನಡುವಿನಗುಂಡಿನ ದಾಳಿಗೆ 13 ಬಲಿ

| Published : Dec 05 2023, 01:30 AM IST

ಮಣಿಪುರ ಮತ್ತೆ ಉದ್ವಿಗ್ನ:ಉಗ್ರಗಾಮಿಗಳ ನಡುವಿನಗುಂಡಿನ ದಾಳಿಗೆ 13 ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ಉಗ್ರಗಾಮಿಗಳ ಗುಂಪಿನ ನಡುವೆ ನಡೆದ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ ಘಟನೆ ಸೋಮವಾರ ಮಣಿಪುರದ ಟೆಂಗ್‌ನೌಪಾಲ್‌ ಜಿಲ್ಲೆಯಲ್ಲಿ ನಡೆದಿದೆ.

ಇಂಫಾಲ್‌: ಎರಡು ಉಗ್ರಗಾಮಿಗಳ ಗುಂಪಿನ ನಡುವೆ ನಡೆದ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ ಘಟನೆ ಸೋಮವಾರ ಮಣಿಪುರದ ಟೆಂಗ್‌ನೌಪಾಲ್‌ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಲೈತು ಗ್ರಾಮದ ಬಳಿ ಮ್ಯಾನ್ಮಾರ್‌ಗೆ ತೆರಳುತ್ತಿದ್ದ ಗುಂಪಿನ ಮೇಲೆ ಸ್ಥಳೀಯ ಪ್ರಭಾವಿ ಗುಂಪು ಸೋಮವಾರ ಮಧ್ಯಾಹ್ನ ಅಡಗಿಕೊಂಡು ದಾಳಿ ನಡೆಸಿದೆ. ಬಳಿಕ ಇಬ್ಬರ ನಡುವೆ ಗುಂಡಿನ ದಾಳಿ ನಡೆದಿದೆ. ಇದರಿಂದಾಗಿ 13 ಮಂದಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಆದರೆ ಶವಗಳ ಗುರುತು ಪತ್ತೆಯಾಗಬೇಕಿದ್ದು, ಅವುಗಳು ಸ್ಥಳೀಯತೆಯನ್ನು ಹೋಲುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದ ಟೆಂಗ್‌ನೌಪಾಲ್‌ ಜಿಲ್ಲೆಯು ಮ್ಯಾನ್ಮಾರ್‌ನೊಂದಿಗೆ ಗಡಿ ಹೊಂದಿದ್ದು, ಇಲ್ಲಿ ಭದ್ರತೆ ಅತಿ ವಿರಳವಾಗಿದೆ.