ಸೆನ್ಸೆಕ್ಸ್ 1,064, ನಿಫ್ಟಿ 322 ಅಂಕ ಕುಸಿತ: ₹4.92 ಲಕ್ಷ ಕೋಟಿ ನಷ್ಟ

| Published : Dec 18 2024, 12:47 AM IST

ಸೆನ್ಸೆಕ್ಸ್ 1,064, ನಿಫ್ಟಿ 322 ಅಂಕ ಕುಸಿತ: ₹4.92 ಲಕ್ಷ ಕೋಟಿ ನಷ್ಟ
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌, ನಿಫ್ಟಿ ಸತತ ಎರಡನೇ ದಿನವೂ ಕುಸಿತ ಕಂಡಿದ್ದು, ಶೇ.1 ಕ್ಕಿಂತ ಜಾಸ್ತಿ ಕುಸಿತವಾಗಿದೆ. ಸೆನ್ಸೆಕ್ಸ್‌ ಮಂಗಳವಾರ 1,064.ಅಂಕಗಳ ಕುಸಿತದೊಂದಿಗೆ 80,612ರಲ್ಲಿ ಅಂತ್ಯಗೊಂಡಿತು. ಇದೇ ವೇಳೆ ನಿಫ್ಟಿ 332. 25 ಅಂಕ ಕುಸಿದು 24,336ರಲ್ಲಿ ಮುಕ್ತಾಯವಾಯಿತು. ಇದರಿಂದ ಹೂಡಿಕೆದಾರರ ಸಂಪತ್ತಿನಲ್ಲಿ ಒಂದೇ ದಿನ ಬರೋಬ್ಬರಿ 4.92 ಲಕ್ಷ ಕೋಟಿ ನಷ್ಟವಾಗಿದೆ.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌, ನಿಫ್ಟಿ ಸತತ ಎರಡನೇ ದಿನವೂ ಕುಸಿತ ಕಂಡಿದ್ದು, ಶೇ.1 ಕ್ಕಿಂತ ಜಾಸ್ತಿ ಕುಸಿತವಾಗಿದೆ. ಸೆನ್ಸೆಕ್ಸ್‌ ಮಂಗಳವಾರ 1,064.ಅಂಕಗಳ ಕುಸಿತದೊಂದಿಗೆ 80,612ರಲ್ಲಿ ಅಂತ್ಯಗೊಂಡಿತು. ಇದೇ ವೇಳೆ ನಿಫ್ಟಿ 332. 25 ಅಂಕ ಕುಸಿದು 24,336ರಲ್ಲಿ ಮುಕ್ತಾಯವಾಯಿತು. ಇದರಿಂದ ಹೂಡಿಕೆದಾರರ ಸಂಪತ್ತಿನಲ್ಲಿ ಒಂದೇ ದಿನ ಬರೋಬ್ಬರಿ 4.92 ಲಕ್ಷ ಕೋಟಿ ನಷ್ಟವಾಗಿದೆ.

ಅಮೆರಿಕದಲ್ಲಿ ಬಡ್ಡಿದರ ಬದಲಾವಣೆ ಆಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಭಾರತದ ಷೇರುಪೇಟೆ ಮಂಕಾಯಿತು. ಸೋಮವಾರ ಸೆನ್ಸೆಕ್ಸ್‌ 384.55, ನಿಫ್ಟಿ 100.5 ಅಂಕಗಳಷ್ಟು ಕುಸಿತ ಕಂಡಿತ್ತು.

ಭಾರ್ತಿ ಏರ್ಟೆಲ್, ಇಂಡಸ್‌ಇಂಡ್‌ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ , ಎಚ್‌ಡಿಎಫ್‌ಸಿ ಸೇರಿದಂತೆ ಎಲ್ಲ ಸಂಸ್ಥೆಗಳ ಮಾರುಕಟ್ಟೆಯು ಕೆಂಪು ಬಣ್ಣದಲ್ಲಿಯೇ ಅಂತ್ಯವಾಯಿತು.

ಬಾಲಕಿಯಿಂದ ಶೂಟೌಟ್‌: ಅಮೆರಿಕದಲ್ಲಿ ಶಿಕ್ಷಕ, ಸಹಪಾಠಿಗೆ ಗುಂಡಿಕ್ಕಿ ಹತ್ಯೆಮ್ಯಾಡಿಸನ್‌ (ಅಮೆರಿಕ): ಗನ್‌ ಸಂಸ್ಕೃತಿ ಅಮೆರಿಕದಲ್ಲಿ ಮುಂದುವರಿದಿದ್ದು, ವಿಸ್ಕಾನ್ಸಿನ್ ರಾಜ್ಯದ ಮ್ಯಾಡಿಸನ್‌ ನಗರದ ಕ್ರೈಸ್ತ ಶಾಲೆಯೊಂದರಲ್ಲಿ 15 ವರ್ಷದ ವಿದ್ಯಾರ್ಥಿನಿಯೊಬ್ಬಳು ಶಾಲಾ ಕೊಠಡಿಯಲ್ಲಿ ಗುಂಡು ಹಾರಿಸಿ ಶಿಕ್ಷಕ, ಸಹಪಾಠಿಯೊಬ್ಬರನ್ನು ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾಳೆ.ಅಬಂಡಂಟ್ ಲೈಫ್ ಕ್ರೈಸ್ತ ಶಾಲೆಯಲ್ಲಿ ಸೋಮವಾರ ಘಟನೆ ನಡೆದಿದ್ದು, ನಟಾಲಿಯಾ ರುಪ್ನೋ ಹೆಸರಿನ ಬಾಲಕಿ ಕೃತ್ಯ ಎಸಗಿದವಳು.ಬಾಲಕಿ ಹಾರಿಸಿದ ಗುಂಡಿನಿಂದ ಆರು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಒಬ್ಬ ಶಿಕ್ಷಕ, ಮೂವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಐಟಿಆರ್‌ ಮಿಸ್‌ಮ್ಯಾಚ್‌ ಆದ ತೆರಿಗೆದಾರರಿಗೆ ಐಟಿ ಇಲಾಖೆ ಎಸ್ಸೆಮ್ಮೆಸ್‌ನವದೆಹಲಿ: 2023-24 ಮತ್ತು 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿ ಮತ್ತು ವಹಿವಾಟು ವರದಿ ನಡುವೆ ಹೊಂದಾಣಿಕೆಯಾಗದ ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆಯು ಎಸ್ಸೆಮ್ಮೆಸ್‌ ಸಂದೇಶ ಕಳಿಸುವ ಮೂಲಕ ಅಭಿಯಾನ ಆರಂಭಿಸಿದೆ. ಇಂಥವರಿಗೆ 2025ರ ಮಾ.31ರೊಳಗೆ ಪರಿಷ್ಕೃತ ಐಟಿಆರ್‌ ಸಲ್ಲಿಸಲು ಅವಕಾಶ ನೀಡಲಾಗಿದೆ.ಈ ಅಭಿಯಾನದ ಅಡಿ ಹೆಚ್ಚು ಆದಾಯ/ ವಹಿವಾಟು ಪ್ರಮಾಣ ಹೊಂದಿದ್ದರೂ, ತೆರಿಗೆ ಪಾವತಿ ಮಾಡದಿರುವವರನ್ನು ಗುರಿಪಡಿಸಲಾಗಿದೆ. ವಾರ್ಷಿಕ ಮಾಹಿತಿ ವರದಿಯಲ್ಲಿ (ಎಐಎಸ್‌) ಈ ರೀತಿ ಹೊಂದಾಣಿಕೆಯಾಗದ ಮಾಹಿತಿಯನ್ನು ಗ್ರಾಹಕರಿಗೆ ಇ-ಮೇಲ್, ಸಂದೇಶಗಳ ಸುಲಭವಾಗಿ ಅರ್ಥ ಮಾಡಿಸಿ, ಅರಿವು ಮೂಡಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಅಭಿಯಾನ ಹಮ್ಮಿಕೊಂಡಿದೆ. ಈ ಮೂಲಕ ಸುಲಭ ತೆರಿಗೆ ಪಾವತಿಗೆ ಕ್ರಮ ತೆಗೆದುಕೊಂಡಿದೆ.

ದಿಲ್ಲಿಯಲ್ಲಿ ಮತ್ತೆ 20 ಶಾಲೆಗಳಿಗೆ ಬಾಂಬ್ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್ ಬೆದರಿಕೆ ಘಟನೆ ಮುಂದುವರೆದಿದೆ. ಮಂಗಳವಾರ ದೆಹಲಿಯ ಸುಮಾರು 20 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಇದು ಕಳೆದ 9 ದಿನದಲ್ಲಿ ನಡೆದ 5ನೇ ಘಟನೆಯಾಗಿದೆ.

ಇಮೇಲ್‌ ಮೂಲಕ ಶಾಲೆಗಳಿಗೆ ಬಾಂಬ್ ಸ್ಫೋಟದ ಸಂದೇಶ ರವಾನೆಯಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ ಸ್ಥಳಕ್ಕಾಗಮಿಸಿ ಪರೀಶಿಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಚೀನಾದಲ್ಲಿ ಭ್ರಷ್ಟ ಮಾಜಿ ಅಧಿಕಾರಿ ಪಿಂಗ್‌ ನೇಣುಗಂಬಕ್ಕೆ

ಬೀಜಿಂಗ್: ಚೀನಾದಲ್ಲಿ 421 ಮಿಲಿಯನ್ ಡಾಲರ್‌ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ಉತ್ತರ ಒಳ ಮಂಗೋಲಿಯಾ ಸ್ವಾಯತ್ತ ಪ್ರದೇಶದ ಮಾಜಿ ಅಧಿಕಾರಿ ಲಿ ಜಿಯಾನ್‌ ಪಿಂಗ್ ಅವರನ್ನು ಮಂಗಳವಾರ ಚೀನಾ ಸರ್ಕಾರ ಮಂಗಳವಾರ ಗಲ್ಲಿಗೇರಿಸಿದೆ.ಹೊಹೋಟ್‌ನಲ್ಲಿ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ವಲಯದ ಆಡಳಿತರೂಢ ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕಾರಿ ಸಮಿತಿಯ ಮಾಜಿ ಕಾರ್ಯದರ್ಶಿ ಲಿ ಜಿಯಾನ್‌ ಪಿಂಗ್ ಅವರಿಗೆ 2022ರ ಸೆಪ್ಟೆಂಬರ್‌ನಲ್ಲಿಯೇ ಮರಣದಂಡನೆ ಶಿಕ್ಷೆಯನ್ನು ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ 2024ರ ಆಗಸ್ಟ್‌ನಲ್ಲಿ ಸರ್ಕಾರ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಸುಪ್ರೀಂ ಪೀಪಲ್ಸ್ ನ್ಯಾಯಾಲಯದ ಅನುಮೋದನೆ ಮೇರೆಗೆ ಒಳ ಮಂಗೋಲಿಯಾದ ನ್ಯಾಯಾಲಯವು ಮರಣದಂಡನೆ ನಡೆಸಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.