ಎಲ್ಲಾ ಕಾರುಗಳ ಬೆಲೆ ಶೇ.0.45ರಷ್ಟು ಹೆಚ್ಚಿಸಿದ ಮಾರುತಿ ಸುಜುಕಿ

| Published : Jan 17 2024, 01:45 AM IST / Updated: Jan 17 2024, 02:05 PM IST

ಸಾರಾಂಶ

ದೇಶದ ಪ್ರಖ್ಯಾತ ಕಾರು ಕಂಪನಿ ಮಾರುತಿ ಸುಜು಼ಕಿ ತನ್ನ ಎಲ್ಲ ಕಾರುಗಳ ಬೆಲೆಯನ್ನು ಅಲ್ಪ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ನವದೆಹಲಿ: ದೇಶದ ಪ್ರಮುಖ ಕಾರು ತಯಾರಿಕ ಕಂಪನಿ ಮಾರುತಿ ಸುಜುಕಿ ತನ್ನ ಮಾದರಿಯ ಕಾರುಗಳ ಬೆಲೆಯನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಶೇ.0.45ರಷ್ಟು ಹೆಚ್ಚಳ ಮಾಡಿದೆ.

ಈ ಹೆಚ್ಚಳದಿಂದಾಗಿ ದೆಹಲಿ ಸೇರಿದಂತೆ ದೇಶದ ಎಲ್ಲಾ ಕಾರು ಶೋರೂಂಗಳಲ್ಲಿ ಮಾರುತಿ ಕಾರುಗಳ ಬೆಲೆ ಏರಿಕೆಯಾಗಲಿದೆ.

ಇದು ಜ.16ರಿಂದಲೇ ಜಾರಿಯಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮಾರುತಿ ಸುಜುಕಿ ತಯಾರಿಕೆಯ ಕಾರುಗಳಾದ ಆಲ್ಟೋನಿಂದ ಇನ್‌ವಿಕ್ಟೋವರೆಗೆ 3.54 ರಿಂದ 28.42 ಲಕ್ಷ ರು. ವರೆಗೆ ಕಾರುಗಳನ್ನು ಮಾರಾಟವಾಗುತ್ತಿವೆ.