ಸಾರಾಂಶ
ಮುಂಬೈ: ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕುಟುಂಬ ಮಂಗಳವಾರ ಸಾಮೂಜಿಕ ವಿವಾಹ ಕಾರ್ಯಕ್ರಮವನ್ನು ನಡೆಸಿತು. ಈ ಸಮಾರಂಭದಲ್ಲಿ 50ಕ್ಕೂ ಹೆಚ್ಚು ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟರು. ಅನಂತ್ ಅಂಬಾನಿ ವಿವಾಹಕ್ಕೂ ಮುನ್ನ ಈ ಸಮಾರಂಭವನ್ನು ಕುಟುಂಬ ಕೈಗೊಂಡಿತು.
ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಘರ್ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದಂಥ ವಧು- ವರರಿಗೆ ವಿವಾಹ ನಡೆಸಲಾಯಿತು. ಇಲ್ಲಿ ಪ್ರತಿ ವಧುವಿಗೆ ತವರು ಮನೆಯಿಂದ ಕೊಡುವಂತಹ ಸ್ತ್ರೀಧನವಾಗಿ 1.01 ಲಕ್ಷ ರು., ಹಾಸಿಗೆ-ದಿಂಬು ಸೇರಿ ಒಂದು ವರ್ಷಕ್ಕೆ ಆಗುವಷ್ಟು ಗೃಹ ಬಳಕೆ ಪದಾರ್ಥಗಳನ್ನು ಅಂಬಾನಿ ಕುಟುಂಬ ನೀಡಿತು. ಈ ಸಮಾರಂಭದಲ್ಲಿ ವಧು-ವರರ ಕುಟುಂಬದ 800ಕ್ಕೂ ಹೆಚ್ಚಿನ ಜನರು ಪಾಲ್ಗೊಂಡಿದ್ದರು. ಎಲ್ಲರಿಗೂ ಭವ್ಯ ಭೋಜನೆ ಏರ್ಪಡಿಸಲಾಗಿತ್ತು.==
ರಾಮ ಮಂದಿರ ಅರ್ಚಕರಿಗೆ ಕೇಸರಿ ಬದಲು ಹಳದಿ ಬಣ್ಣದ ಉಡುಪುಅಯೋಧ್ಯೆ: ರಾಮ ಮಂದಿರ ಅಚರ್ಕರ ಡ್ರೆಸ್ ಕೋಡ್‌ನಲ್ಲಿ ಬದಲಾವಣೆ ಆಗಿದೆ. ಈ ಬದಲಾವಣೆ ನಂತರ ಅಯೋಧ್ಯೆಯಲ್ಲಿ ಅರ್ಚಕರು ಹಳದಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಅರ್ಚಕರು ಕೆಲಸ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆಗೆ ನಿಷೇಧ ಹೇರಿದೆ.ದೇವಾಲಯವನ್ನು ನಿರ್ವಹಿಸುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಈ ಹಿಂದಿದ್ದ ಸಾಂಪ್ರದಾಯಿಕ ಕೇಸರಿ ಉಡುಪು ಬದಲಿಸಿ ಪುರೋಹಿತರಿಗೆ ಹಳದಿ ಬಣ್ಣದ ಕುರ್ತಾ ಮತ್ತು ದೋಸ್ತಿಯನ್ನು ಪರಿಚಯಿಸಿದೆ. ಪುರೋಹಿತರ ನಡುವೆ ಏಕರೂಪತೆಯನ್ನು ತರುವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ.
ಇದಲ್ಲದೇ ಅರ್ಚಕರು ಗರ್ಭಗುಡಿಯೊಳಗೆ ಭದ್ರತಾ ಕಾರಣದಿಂದ ಸ್ಮಾರ್ಟ್‌ಫೋನ್ ಕೊಂಡೊಯ್ಯುವುದನ್ನು ನಿರ್ಬಂಧಿಸಿದೆ. ಅರ್ಚಕರಿಗೆ 5 ತಾಸಿನ ಶಿಫ್ಟ್ ನಿಗದಿಪಡಿಸಲಾಗಿದೆ.==
ನೇಪಾಳದಲ್ಲಿ ಪ್ರಚಂಡ ಪದಚ್ಯುತಿ?ಕಾಠ್ಮಂಡು: ನೇಪಾಳ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಚಂಡ ವಿರುದ್ಧ ಮಿತ್ರಪಕ್ಷವಾದ ಸಿಪಿಎನ್-ಯುಎಂಎಲ್ ಬಂಡೆದ್ದಿದ್ದು, ವಿಪಕ್ಷವಾದ ನೇಪಾಳಿ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೆ ಮೈತ್ರಿ ಮಾಡಿಕೊಂಡು, ‘ರಾಷ್ಟ್ರೀಯ ಒಮ್ಮತದ ಸರ್ಕಾರ’ ರಚಿಸಲು ಮುಂದಾಗಿವೆ. ಈ ಮೂಲಕ ಪ್ರಧಾನಿ ಪುಷ್ಪಕಮಲ್ ದಹಲ್ ‘ಪ್ರಚಂಡ’ ಅವರಿಗೆ ಹಿನ್ನಡೆ ಉಂಟಾಗಿದ್ದು ಪದಚ್ಯುತರಾಗುವ ಸಾಧ್ಯತೆ ಇದೆ.ನೇಪಾಳಿ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ಮತ್ತು ಸಿಪಿಎನ್-ಯುಎಂಎಲ್ ಮುಖ್ಯಸ್ಥ , ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಹೊಸ ಮೈತ್ರಿಯ ಬಗ್ಗೆ ಚರ್ಚಿಸಿದ್ದಾರೆ. ದೇವುಬಾ ಮತ್ತು ಓಲಿ ಅಧಿಕಾರ ಹಂಚಿಕೆ ಸೂತ್ರದ ಮೇಲೆ ಪ್ರಧಾನಿ ಹುದ್ದೆಯನ್ನು ಸಮಾನ ಅವಧಿಗೆ ಹಂಚಿಕೊಳ್ಳುವ ಒಮ್ಮತಕ್ಕೆ ಬಂದಿದ್ದಾರೆ.ಎರಡು ಪಕ್ಷಗಳ ಮೈತ್ರಿಯಿಂದ ಸಂಸಂತ್ತಿನಲ್ಲಿ ಈ ಕೂಟದ ಬಲ ಸರಳ ಬಹುಮತಕ್ಕಿಂತ ಅಧಿಕವಾಗಲಿದೆ. ಒಂದು ವೇಳೆ ಹೊಸ ಮೈತ್ರಿ ಅಂತಿಮವಾದರೆ ಪ್ರಚಂಡದ ನೇತೃತ್ವದ ಜೊತೆಗಿನ ನಾಲ್ಕು ತಿಂಗಳ ಸಿಪಿಎನ್-ಯುಎಂಎಲ್ ಮೈತ್ರಿ ಮುರಿದು ಬೀಳಲಿದೆ. ಕಳೆದ 16 ವರ್ಷಗಳಲ್ಲಿ ನೇಪಾಳ 13 ಸರ್ಕಾರಗಳನ್ನು ಕಂಡಿದೆ.
==ಬದರೀನಾಥದಲ್ಲಿ ಅಲಕನಂದಾ ನದಿಯಲ್ಲಿ ಪ್ರವಾಹ: ಭಕ್ತರಲ್ಲಿ ಆತಂಕ
ಗೋಪೇಶ್ವರ: ಉತ್ತರಾಖಂಡ ರಾಜ್ಯದ ಪವಿತ್ರ ಕ್ಷೇತ್ರವಾದ ಬದರೀನಾಥದಲ್ಲಿ ಹರಿಯುವ ಅಲಕನಂದಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ಯಾತ್ರೆಯ ಸಂಭ್ರಮದಲ್ಲಿರುವ ಭಕ್ತಾದಿಗಳಲ್ಲಿ ಆತಂಕ ಹೆಚ್ಚಾಗಿದೆ.ಸೋಮವಾರ ಸಂಜೆ ಅಲಕನಂದಾ ನದಿಯ ಹರಿವು ಹೆಚ್ಚಾಗಿ ಪ್ರವಾಹ ಸೃಷ್ಟಿಯಾಗಿತ್ತು. ಪ್ರವಾಹದ ನೀರು ಭಕ್ತರು ತಮ್ಮ ಪೂರ್ವಜರಿಗೆ ಪಿಂಡಪ್ರದಾನ ಮಾಡುವ ಬ್ರಹ್ಮಕಪಾಲ ಸ್ಥಳವನ್ನು ಮುಳುಗಿಸಿ, ಬದರಿನಾಥ ದೇವಾಲಯದ ಸಮೀಪವಿರುವ ತಪ್ತಕುಂಡದ ಗಡಿಯವರೆಗೂ ತಲುಪಿತ್ತು. ಇದರಿಂದ ಭಕ್ತರಲ್ಲಿ ಆತಂಕ ಉಂಟಾಗಿದೆ.ಅಲಕನಂದಾ ನದಿಯ ಪ್ರವಾಹದಿಂದ ನದಿಯ ದಡದಲ್ಲಿ ಕೈಗೊಂಡಿದ್ದ ಉತ್ಖನನದಲ್ಲಿ ಸಂಗ್ರಹಿಸಲಾಗಿದ್ದ ಅವಶೇಷಗಳೆಲ್ಲಾ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.