ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ : ಭಾರತ ಬೆದರಿಕೆ ಹಾಕುತ್ತಿದೆ ಎಂದು ಆರೋಪ

| Published : Sep 28 2024, 01:26 AM IST / Updated: Sep 28 2024, 05:05 AM IST

Pakistan-economy-crisis
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ : ಭಾರತ ಬೆದರಿಕೆ ಹಾಕುತ್ತಿದೆ ಎಂದು ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸುತ್ತಿದೆ ಮತ್ತು ಕಾಶ್ಮೀರವನ್ನು ಕೈವಶ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಸದಾ ಕಾಶ್ಮೀರ ವಿಷಯ ಪ್ರಸ್ತಾಪ ಮಾಡುವ ಪಾಕಿಸ್ತಾನ, ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ದೇಶದ ಭಾಗವಾಗ ಕಾಶ್ಮೀರವನ್ನು ಕೈವಶ ಮಾಡಲು ಭಾರತ ಪ್ರಯತ್ನಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದೆ.

ಶುಕ್ರವಾರ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌, ‘ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ. ಹೀಗೆ ಹೆಚ್ಚಿಸಿಕೊಂಡ ಸೇನಾ ಬಲವನ್ನು ಪಾಕಿಸ್ತಾನದ ಗಡಿಯಲ್ಲಿ ನಿಯೋಜಿಸುತ್ತಿದೆ. 

ಈ ಮೂಲಕ ವಾಸ್ತವ ಗಡಿ ನಿಯಂತ್ರಣ ರೇಖೆ ದಾಟಿ ಬಂದು ನಮ್ಮ ದೇಶದ ಭಾಗವಾದ ಕಾಶ್ಮೀರವನ್ನು ಕೈವಶ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಿದೆ. ಭಾರತದ ಯುದ್ಧದ ಸಿದ್ದಾಂತವನ್ನು ಗಮನಿಸಿದರೆ ಅದು ಸಣ್ಣ ಪ್ರಮಾಣದ ದಾಳಿ ಅಥವಾ ಅಂಥ ದಾಳಿ ವಿಸ್ತರಣೆಗೊಂಡು ಪರಮಾಣು ದಾಳಿಯ ಅಪಾಯವನ್ನೂ ಒಳಗೊಂಡಿದೆ. ಆದರೆ ಇಂಥ ಯಾವುದೇ ದಾಳಿಗೆ ಪಾಕಿಸ್ತಾನ ಸೂಕ್ತ ತಿರುಗೇಟು ನೀಡಲಿದೆ’ ಎಂದು ಹೇಳಿದ್ದಾರೆ.