ಸಾರಾಂಶ
ದೀಪಾವಳಿ ಹಾಗೂ ಧನ್‌ತೇರಾಸ್ ಅಂಗವಾಗಿ ದೇಶದ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು.
ನವದೆಹಲಿ: ದೀಪಾವಳಿ ಹಾಗೂ ಧನ್‌ತೇರಾಸ್ ಅಂಗವಾಗಿ ದೇಶದ ರಾಜಧಾನಿ ನವದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶನಿವಾರ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು. ಹೀಗಾಗಿ ವಾಹನ ಸವಾರರು ಗಂಟೆ ಗಟ್ಟಲೆ ರಸ್ತೆಯಲ್ಲಿ ಕಳೆಯುವಂತಾಯಿತು.
ದಿಲ್ಲಿಯಲ್ಲಿದ್ದ ಅನ್ಯ ರಾಜ್ಯದವರು ಊರಿಗೆ ತೆರಳಿದ ಕಾರಣ ದೆಹಲಿ ಹಾಗೂ ಉತ್ತರ ಪ್ರದೇಶದ ಗಡಿಯಲ್ಲಿರುವ ಆನಂದ್ ವಿಹಾರ್ ರೈಲು ನಿಲ್ದಾಣ ಹಾಗೂ ಅಂತರ್‌ರಾಜ್ಯ ಬಸ್ ನಿಲ್ದಾಣದಲ್ಲಿ ಜನಸಾಗರ ಉಂಟಾಗಿತ್ತು. ಇದಲ್ಲದೇ ದೆಹಲಿ-ಮೇರಠ್, ದೆಹಲಿ ಗುರುಗ್ರಾಮ ಎಕ್ಸ್‌ಪ್ರೆಸ್ ಹೆದ್ದಾರಿಗಳು ವಾಹನ ದಟ್ಟಣೆ ಅನುಭವಿಸಿದವು.ಹಬ್ಬದ ಖರೀದಿ ಭರಾಟೆ ಕಾರಣ ಮಾರುಕಟ್ಟೆಗಳೂ ಗಿಜಿಗಿಟ್ಟುತ್ತಿದ್ದವು.
ಜನರು ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ.