ಸಾರಾಂಶ
ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್‌ನ ಮಾತೃಸಂಸ್ಥೆಯಾದ ‘ಮೆಟಾ’, ಯುರೋಪ್ ದೇಶಗಳಲ್ಲಿ ಚುನಾವಣೆ, ರಾಜಕೀಯ, ಸಾಮಾಜಿಕ ಸಮಸ್ಯೆಗಳ ಕುರಿತಾದ ಜಾಹೀರಾತು ಪ್ರಸಾರ ಸ್ಥಗಿತ ಮಾಡುವುದಾಗಿ ಘೋಷಿಸಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಚುನಾವಣೆಯ ದಿಕ್ಕನ್ನೇ ಬದಲಾಯಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ನವದೆಹಲಿ: ಫೇಸ್‌ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್‌ನ ಮಾತೃಸಂಸ್ಥೆಯಾದ ‘ಮೆಟಾ’, ಯುರೋಪ್ ದೇಶಗಳಲ್ಲಿ ಚುನಾವಣೆ, ರಾಜಕೀಯ, ಸಾಮಾಜಿಕ ಸಮಸ್ಯೆಗಳ ಕುರಿತಾದ ಜಾಹೀರಾತು ಪ್ರಸಾರ ಸ್ಥಗಿತ ಮಾಡುವುದಾಗಿ ಘೋಷಿಸಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಚುನಾವಣೆಯ ದಿಕ್ಕನ್ನೇ ಬದಲಾಯಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಯುರೋಪಿಯನ್ ಒಕ್ಕೂಟ ಜಾರಿಗೆ ತಂದಿರುವ ಕಠಿಣ ಕಾನೂನಿನ ಕಾರಣದಿಂದ ಈ ನಿರ್ಧಾರ ಕೈಗೊಂಡಿದೆ. ಗೂಗಲ್‌ನ ಅಲ್ಫಾಬೆಟ್ ಕಂಪನಿ ನವೆಂಬರ್‌ನಲ್ಲಿ ಇಂತಹದ್ದೇ ನಿರ್ಧಾರ ಕೈಗೊಂಡಿತ್ತು. ಇದೀಗ ಮೆಟಾದ ಸರದಿ. ಯುರೋಪಿಯನ್ ಯೂನಿಯನ್ ತನ್ನ 27 ದೇಶಗಳಲ್ಲಿ ಪಾರದರ್ಶಕತೆ ಮತ್ತು ಜಾಹೀರಾತುಗಳ ಗುರಿ( ಟಿಟಿಪಿಎ) ನಿಯಂತ್ರಣ ಕಾಯ್ದೆಯನ್ನು ಅ.10ರಿಂದ ಜಾರಿಗೆ ತರಲಿದೆ. ಈ ಪ್ರಕಾರ ಟೆಕ್ ಕಪನಿಗಳು ಜಾಹೀರಾತಿನ ಸಂದರ್ಭದಲ್ಲಿ ಯಾರು ಹಣವನ್ನು ನೀಡಿದವರು ಮತ್ತು ಎಷ್ಟು ಹಣ ನೀಡಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಚುನಾವಣೆ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತಾದ ಜಾಹೀರಾತಿನಲ್ಲಿಯೂ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಇದೇ ಕಾರಣಕ್ಕೆ ಮೆಟಾ ಜಾಹೀರಾತುಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿಕೊಂಡಿದೆ.