ಪ್ಯಾಲೆಸ್ತಿನ್‌ಗೆ ಬೆಂಬಲ ನೀಡಿದ್ದಕ್ಕೆ ನೀಲಿ ಚಿತ್ರ ನಟಿ ಮಿಯಾ ಖಲೀಫಾಗೆ ಕೊಕ್‌

| Published : Oct 11 2023, 12:45 AM IST

ಪ್ಯಾಲೆಸ್ತಿನ್‌ಗೆ ಬೆಂಬಲ ನೀಡಿದ್ದಕ್ಕೆ ನೀಲಿ ಚಿತ್ರ ನಟಿ ಮಿಯಾ ಖಲೀಫಾಗೆ ಕೊಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್‌- ಪ್ಯಾಲೆಸ್ತಿನ್‌ ಸಂಘರ್ಷದ ಕುರಿತು ಬಹಿರಂಗವಾಗಿಯೇ ಪ್ಯಾಲೆಸ್ತಿನ್‌ಗೆ ಬೆಂಬಲ ಸೂಚಿಸಿದ್ದ ನೀಲಿ ಚಿತ್ರ ನಟಿ ಮಿಯಾ ಖಲೀಫಾ ಅವರ ಜತೆ ಕೆನಡಾದ ಟೀವಿ ಹಾಗೂ ರೇಡಿಯೋ ಹೋಸ್ಟ್‌ ಸಂಸ್ಥೆಯಾಗಿರುವ ‘ಟಾಡ್‌ ಶಾಪಿರೋ’ ತನ್ನ ಒಪ್ಪಂದವನ್ನು ಮುರಿದುಕೊಂಡಿದೆ.
ಜೆರುಸಲೇಂ: ಇಸ್ರೇಲ್‌- ಪ್ಯಾಲೆಸ್ತಿನ್‌ ಸಂಘರ್ಷದ ಕುರಿತು ಬಹಿರಂಗವಾಗಿಯೇ ಪ್ಯಾಲೆಸ್ತಿನ್‌ಗೆ ಬೆಂಬಲ ಸೂಚಿಸಿದ್ದ ನೀಲಿ ಚಿತ್ರ ನಟಿ ಮಿಯಾ ಖಲೀಫಾ ಅವರ ಜತೆ ಕೆನಡಾದ ಟೀವಿ ಹಾಗೂ ರೇಡಿಯೋ ಹೋಸ್ಟ್‌ ಸಂಸ್ಥೆಯಾಗಿರುವ ‘ಟಾಡ್‌ ಶಾಪಿರೋ’ ತನ್ನ ಒಪ್ಪಂದವನ್ನು ಮುರಿದುಕೊಂಡಿದೆ. ಹೀಗಾಗಿ ಉಗ್ರರ ದಾಳಿ ಬೆಂಬಲಿಸಿದ್ದ ಮಿಯಾಗೆ ವ್ಯವಹಾರಿಕವಾಗಿ ಹಿನ್ನಡೆಯಾಗಿದೆ. ಇಸ್ರೇಲ್‌-ಹಮಾಸ್‌ ಕದನದ ಬಗ್ಗೆ ಟ್ವೀಟ್‌ ಮಾಡಿದ್ದ ಮಿಯಾ ‘ಬರೀ ಇಸ್ರೇಲ್‌ ಮಾತ್ರವಲ್ಲ. ಪ್ಯಾಲೆಸ್ತೀನ್‌ ಪರಿಸ್ಥಿತಿಯನ್ನೂ ನೋಡಿ. ಪ್ಯಾಲೆಸ್ತೀನ್‌-ಇಸ್ರೇಲ್‌ ಸಂಘರ್ಷದ ಇತಿಹಾಸ ಅರಿಯಿರಿ’ ಎಂದಿದ್ದರು. ಇದು ಕೊಲೆ ಮತ್ತು ಹಿಂಸೆಗೆ ಮಿಯಾ ಅವರ ಬೆಂಬಲವನ್ನು ಸೂಚಿಸುವ ಭಯಾನಕತೆಯಾಗಿದೆ ಎಂದು ಖಂಡಿಸಿರುವ ಟಾಡ್‌ ಶಾಪಿರೋ ಕೂಡಲೇ ಒಪ್ಪಂದ ಮುರಿದುಕೊಂಡಿದೆ.