ಸಾರಾಂಶ
‘ಹಳೆಯ, ಗಡ್ಡ ಬಿಟ್ಟ ಹಾಗೂ ಹಲ್ಲು ಬಿದ್ದಿರುವ ನಟರಿಂದ ಯುವ ನಟರಿಗೆ ಅವಕಾಶವೇ ಸಿಗದಂತಾಗಿದೆ ಎಂದು ತಮಿಳುನಾಡಿನ ಹಿರಿಯ ಸಚಿವ ದುರೈಮುರುಗನ್ ಹೇಳಿದ್ದಾರೆ.
ಚೆನ್ನೈ: ‘ಹಳೆಯ, ಗಡ್ಡ ಬಿಟ್ಟಹಾಗೂ ಹಲ್ಲು ಬಿದ್ದಿರುವ ನಟರಿಂದ ಯುವ ನಟರಿಗೆ ಅವಕಾಶವೇ ಸಿಗದಂತಾಗಿದೆ ಎಂದು ತಮಿಳುನಾಡಿನ ಹಿರಿಯ ಸಚಿವ ದುರೈಮುರುಗನ್ ಹೇಳಿದ್ದಾರೆ. ನಟ ರಜನೀಕಾಂತ್ ರನ್ನು ಉದ್ದೇಶಿಸಿಯೇ ಅವರು ಹೀಗೆ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಇತ್ತೀಚೆಗೆ ರಜನಿ ಅವರು ಸಿಎಂ ಎಂ.ಕೆ. ಸ್ಟಾಲಿನ್ರನ್ನು ಹೊಗಳಿ ಅವರ ಸುತ್ತಲಿನ ಹಿರಿಯ ಸಚಿವರನ್ನು ತೆಗಳಿದ್ದರು. ಹೀಗಾಗಿ ದುರೈಮುರುಗನ್ ರಜನಿ ಹಿರಿ ತನ ಉದ್ದೇಶಿಸಿ ಟಾಂಗ್ ನೀಡಿದ್ದಾರೆನ್ನಲಾಗಿದೆ.
ಬಿಡುಗಡೆಯಾದ 10 ದಿನಕ್ಕೇ ₹500 ಕೋಟಿ ಬಾಚಿಕೊಂಡ ‘ಸ್ತ್ರೀ-2’
ನವದೆಹಲಿ: ರಾಜ್‌ಕುಮಾರ್ ರಾವ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಹಾರರ್ ಕಾಮಿಡಿ ಚಿತ್ರ ‘ಸ್ತ್ರೀ-2’ ಬಿಡುಗಡೆಯಾದ 10 ದಿನಗಳಲ್ಲಿ ವಿಶ್ವಾದ್ಯಂತ ₹500 ಕೋಟಿ ಬಾಚಿಕೊಂಡಿದೆ.ಭಾರತದಲ್ಲಿ ₹426 ಕೋಟಿ ಹಾಗೂ ವಿದೇಶದಲ್ಲಿ ₹78.5 ಕೋಟಿ ಕಲೆಕ್ಷನ್ ಮಾಡಿದೆ. ಮದ್ದೊಕ್ ಫಿಲ್ಮ್ಸ್ ನಿರ್ಮಾಣದಲ್ಲಿ ಅಮರ್ ಕೌಶಿಕ್ ನಿರ್ದೇಶನದಲ್ಲಿ ಆ.15 ರಂದು ತೆರೆಕಂಡ ಈ ಚಿತ್ರವು 2018 ರಲ್ಲಿ ಬಿಡುಗಡೆಯಾದ ‘ಸ್ತ್ರೀ’ ಚಿತ್ರದ ಮುಂದುವರೆದ ಭಾಗವಾಗಿದೆ.
ಈ ಕುರಿತು ಮದ್ದೊಕ್ ಫಿಲ್ಮ್ಸ್ ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ, ‘ಸ್ತ್ರೀ-2’ ಚಿತ್ರ ಬಿಡುಗಡೆಯಾದ 10 ದಿನಗಳಲ್ಲಿ 500 ಕೋಟಿ ರು. ಸಂಪಾದಿಸಿ ದಾಖಲೆ ನಿರ್ಮಿಸಿದೆ. ಸಿನಿ ಪ್ರೇಕ್ಷಕರ ಪ್ರೀತಿ ಹಾಗೂ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಫೋಸ್ಟ್ ಮಾಡಿದೆ.