ಐಜ್ವಾಲ್‌: ಪಂಚ ರಾಜ್ಯ ಚುನಾವಣೆ ಭಾಗವಾಗಿರುವ ಮಿಜೋರಂನ 40 ಕ್ಷೇತ್ರಗಳಲ್ಲಿ ಮತ ಎಣಿಕೆ ಸೋಮವಾರ ಡಿ.4ರ ಸೋಮವಾರದಂದು ನಡೆಯಲಿದೆ.

ಐಜ್ವಾಲ್‌: ಪಂಚ ರಾಜ್ಯ ಚುನಾವಣೆ ಭಾಗವಾಗಿರುವ ಮಿಜೋರಂನ 40 ಕ್ಷೇತ್ರಗಳಲ್ಲಿ ಮತ ಎಣಿಕೆ ಸೋಮವಾರ ಡಿ.4ರ ಸೋಮವಾರದಂದು ನಡೆಯಲಿದೆ.

ಕ್ರೈಸ್ತ ಸಮುದಾಯ ಹೆಚ್ಚಿರುವ ಮಿಜೋರಂನಲ್ಲಿ ಭಾನುವಾರ ಈಸ್ಟರ್‌ ಸಂಡೇ ವಿಶೇಷ ಆಚರಣೆ ಇರುವ ಕಾರಣ ಮುಂದೂಡುವಂತೆ ಮನವಿಗಳಿಗೆ ಚುನಾವಣೆ ಆಯೋಗ ಮನ್ನಣೆ ನೀಡಿತ್ತು. ಹೀಗಾಗಿ ಈ ಮನವಿಗಳನ್ನು ಪುರಸ್ಕರಿಸಿದ ಚುನಾವಣಾ ಆಯೋಗ ಒಂದು ದಿನ ತಡವಾಗಿ ಮತ ಎಣಿಕೆ ನಡೆಸಲು ನಿರ್ಧರಿಸಿತ್ತು.

ರಾಜ್ಯದಲ್ಲಿ ಎಂಎನ್‌ಎಫ್‌, ಕಾಂಗ್ರೆಸ್‌ ಹಾಗೂ ಬಿಜೆಪಿ, ಇತರ ಪಕ್ಷಗಳ ನಡುವೆ ಸ್ಪರ್ಧೆ ಇದೆ. ಹಾಲಿ ಇಲ್ಲಿ ಎಂಎನ್‌ಎಫ್‌ ಅಧಿಕಾರದಲ್ಲಿದೆ.

ಇದನ್ನು ಹೊರತಾಗಿ ಉಳಿದ ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ, ಹಾಗೂ ಮಧ್ಯಪ್ರದೇಶದಲ್ಲಿ ಮತ ಎಣಿಕೆ ಕಾರ್ಯ ಮುಗಿದಿದೆ.