ಐತಿಹಾಸಿಕ ಕೆಂಪು ಕೋಟೆಯ ಕೋಟೆ ಮೇಲೆ 98 ನಿಮಿಷಗಳ ಸುದೀರ್ಘ ಸ್ವಾತಂತ್ರ್ಯ ದಿನದ ಭಾಷಣ: ಪ್ರಧಾನಿ ಮೋದಿ ದಾಖಲೆ

| Published : Aug 16 2024, 12:47 AM IST / Updated: Aug 16 2024, 05:37 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಐತಿಹಾಸಿಕ ಕೆಂಪು ಕೋಟೆಯ ಕೋಟೆ ಮೇಲೆ 98 ನಿಮಿಷಗಳ ಸುದೀರ್ಘ ಸ್ವಾತಂತ್ರ್ಯ ದಿನದ ಭಾಷಣ ಮಾಡಿ ದಾಖಲೆ ಸ್ಥಾಪಿಸಿದ್ದಾರೆ.

 ನವದೆಹಲಿ :  ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಐತಿಹಾಸಿಕ ಕೆಂಪು ಕೋಟೆಯ ಕೋಟೆ ಮೇಲೆ 98 ನಿಮಿಷಗಳ ಸುದೀರ್ಘ ಸ್ವಾತಂತ್ರ್ಯ ದಿನದ ಭಾಷಣ ಮಾಡಿ ದಾಖಲೆ ಸ್ಥಾಪಿಸಿದ್ದಾರೆ.

ಈ ಮೊದಲು 2016 ರಲ್ಲಿ 96 ನಿಮಿಷ ಕಾಲ ಅವರು ಭಾಷಣ ಮಾಡಿದ್ದರು. ಆ ದಾಖಲೆಯನ್ನು ಈಗ ಅವರೇ ಮುರಿದಿದ್ದಾರೆ. 2017 ರಲ್ಲಿ ಅವರು ಸುಮಾರು 56 ನಿಮಿಷಗಳ ಕಾಲ ಮಾತನಾಡಿದ್ದು ಚಿಕ್ಕ ಭಾಷಣ ಆಗಿದೆ.

ಮೋದಿ ಅವರು 2014ರಲ್ಲಿ ತಮ್ಮ ಮೊದಲ ಸ್ವಾತಂತ್ರ್ಯ ದಿನದ ವೇಳೆ 65 ನಿಮಿಷ ಮಾತನಾಡಿದ್ದರು. 2015ರಲ್ಲಿ ಅವರ ಭಾಷಣ 88 ನಿಮಿಷ, 2018ರಲ್ಲಿ 83 ನಿಮಿಷ, 2019ರಲ್ಲಿ 92 ನಿಮಿಷ, 2020ರಲ್ಲಿ 90 ನಿಮಿಷ ಭಾಷಣ ಮಾಡಿದ್ದರು.2021ರಲ್ಲಿ 88 ನಿಮಿಷ, 2022ರಲ್ಲಿ ಅವರು ಸುಮಾರು 74 ನಿಮಿಷಗಳ ಕಾಲ ಮಾತನಾಡಿದರು. ಕಳೆದ ವರ್ಷ ಮೋದಿಯವರ ಭಾಷಣ 90 ನಿಮಿಷ ಇತ್ತು.

ಮೋದಿಗಿಂತ ಮೊದಲು, 1947ರಲ್ಲಿ ಜವಾಹರಲಾಲ್ ನೆಹರು ಮತ್ತು 1997ರಲ್ಲಿ ಐ.ಕೆ. ಗುಜ್ರಾಲ್ ಅವರು ಕ್ರಮವಾಗಿ 72 ಮತ್ತು 71 ನಿಮಿಷಗಳ ಸುದೀರ್ಘ ಭಾಷಣ ಮಾಡಿದ್ದರು. ಇನ್ನು ನೆಹರು ಮತ್ತು ಇಂದಿರಾ ಅವರು 1954 ಮತ್ತು 1966ರಲ್ಲಿ ಕ್ರಮವಾಗಿ 14 ನಿಮಿಷಗಳಲ್ಲಿ ದಾಖಲೆಯ ಕಡಿಮೆ ಅವಧಿಯ ಭಾಷಣಗಳನ್ನು ಮಾಡಿದ್ದರು.

2012 ಮತ್ತು 2013ರಲ್ಲಿ ಮನಮೋಹನ ಸಿಂಗ್ ಅವರ ಭಾಷಣಗಳು ಕ್ರಮವಾಗಿ 32 ಮತ್ತು 35 ನಿಮಿಷಗಳು ಮಾತ್ರ ಆಗಿದ್ದವು. 2002 ಮತ್ತು 2003ರಲ್ಲಿ ವಾಜಪೇಯಿ ಅವರ ಭಾಷಣಗಳು 25 ಮತ್ತು 30 ನಿಮಿಷಗಳಷ್ಟು ಕಮ್ಮಿ ಅವಧಿಯದಾಗಿತ್ತು.