ಸಾರಾಂಶ
ಆಫ್ಘಾನಿಸ್ತಾನದಲ್ಲಿ ಅಧಿಕಾರ ನಡೆಸುತ್ತಿರುವ ತಾಲಿಬಾನ್ ಉಗ್ರ ಸರ್ಕಾರಕ್ಕೆ, ದೆಹಲಿಯಲ್ಲಿ ತನ್ನ ಪ್ರತಿನಿಧಿಯನ್ನು ಇರಿಸುವ ಅವಕಾಶವನ್ನು ಕಲ್ಪಿಸಲು ಭಾರತ ಸಮ್ಮತಿಸಿದೆ ಎಂದು ವರದಿಗಳು ತಿಳಿಸಿವೆ.
ನವದೆಹಲಿ: ಆಫ್ಘಾನಿಸ್ತಾನದಲ್ಲಿ ಅಧಿಕಾರ ನಡೆಸುತ್ತಿರುವ ತಾಲಿಬಾನ್ ಉಗ್ರ ಸರ್ಕಾರಕ್ಕೆ, ದೆಹಲಿಯಲ್ಲಿ ತನ್ನ ಪ್ರತಿನಿಧಿಯನ್ನು ಇರಿಸುವ ಅವಕಾಶವನ್ನು ಕಲ್ಪಿಸಲು ಭಾರತ ಸಮ್ಮತಿಸಿದೆ ಎಂದು ವರದಿಗಳು ತಿಳಿಸಿವೆ. ಆದರೆ ಪ್ರತಿನಿಧಿಗೆ ರಾಯಭಾರ ಸಿಬ್ಬಂದಿ ಸ್ಥಾನಮಾನ ಮತ್ತು ಕಚೇರಿಗೆ ದೂತಾವಾತ ಕಚೇರಿ ಸ್ಥಾನಮಾನ ನೀಡುವ ಸಾಧ್ಯತಗೆ ಇಲ್ಲ ಎಂದು ಮೂಲಗಳು ತಿಳಿಸಿವೆ. ತಾಲಿಬಾನ್ ಅಧಿಕಾರಕ್ಕೆ ಬರುವ ಪೂರ್ವದಲ್ಲಿದ್ದ ‘ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನ’ದ ರಾಜತಾಂತ್ರಿಕ ಕಾರ್ಯಾಚರಣೆಯಾಗಿಯೇ ರಾಯಭಾರ ಕಚೇರಿ ಅಧಿಕೃತವಾಗಿ ಮುಂದುವರಿಯುತ್ತದೆ. ಅವರ ಬಿಳಿ ಧ್ವಜವನ್ನು ಸಹ ಇಲ್ಲಿ ಹಾರಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದರು. ಅದರ ಬೆನ್ನಲ್ಲೆ ಈ ಸುದ್ದಿ ಹೊರಬಂದಿದೆ.