ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರು ‘ಅಂಬಾನಿ- ಅದಾನಿ ಬಗ್ಗೆ ರಾಹುಲ್ ಏಕೆ ಮಾತು ನಿಲ್ಲಿಸಿದ್ದಾರೆ? ಟೆಂಪೋದಲ್ಲಿ ಅವರಿಗೆ ಎಷ್ಟು ಹಣ ಬಂದಿದೆ?’ ಎಂದು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಅಂಬಾನಿ- ಅದಾನಿ ಬಗ್ಗೆ ರಾಹುಲ್ ಏಕೆ ಮಾತು ನಿಲ್ಲಿಸಿದ್ದಾರೆ? ಟೆಂಪೋದಲ್ಲಿ ಅವರಿಗೆ ಎಷ್ಟು ಹಣ ಬಂದಿದೆ?’ ಎಂದು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ‘ಮೋದಿ ಬಹುಶಃ ತಮ್ಮ ಸ್ವಂತ ಅನುಭವ ಹೇಳುತ್ತಿರಬೇಕು’ ಎಂದು ಟಾಂಗ್ ನೀಡಿದ್ದಾರೆ.
ಇದೇ ವೇಳೆ, ‘ನಮಗೆ ಅಂಬಾನಿ, ಅದಾನಿ ಹಣ ಕಳಿಸಿದ್ದಾರೆ ಎಂದರೆ ಏಕೆ ಅಂಜುತ್ತೀರಿ? ಇ.ಡಿ., ಸಿಬಿಐ ದಾಳಿ ನಡೆಸಿ’ ಎಂದೂ ಸವಾಲು ಹಾಕಿದ್ದಾರೆ.ಮೋದಿ ಹೇಳಿಕೆ ಬಗ್ಗೆ ವಿಡಿಯೋ ಸಂದೇಶ ನೀಡಿರುವ ರಾಹುಲ್, ‘ನಮಸ್ಕಾರ್ ಮೋದಿಜಿ, ನಿಮಗೆ ಭಯವಾಗಿದೆಯೇ? ಸಾಮಾನ್ಯವಾಗಿ ನೀವು ಮುಚ್ಚಿದ ಬಾಗಿಲಿನ ಹಿಂದೆ ಅಂಬಾನಿ, ಅದಾನಿ ಬಗ್ಗೆ ಮಾತನಾಡುತ್ತೀರಿ.
ನೀವು ಮೊದಲ ಬಾರಿಗೆ ಸಾರ್ವಜನಿಕವಾಗಿ ‘ಅಂಬಾನಿ, ಅದಾನಿ’ ಎಂದು ಹೇಳಿದ್ದೀರಿ. ಇದು ನಿಮಗೆ ಭಯವಾಗಿರುವ ಸಂಕೇತ. ಅಲ್ಲದೆ ಟೆಂಪೋದಲ್ಲಿ ಕಾಂಗ್ರೆಸ್‌ಗೆ ಹಣ ಬಂದಿರಬಹುದು ಎಂಬ ನಿಮ್ಮ ಹೇಳಿಕೆ ಸ್ವಂತ ಅನುಭವದಂತಿದೆ’ ಎಂದು ಕಿಚಾಯಿಸಿದ್ದಾರೆ.