ಮೋದಿ ಸಾಮ್ರಾಟನಲ್ಲ, ಎಲ್ಲ ರಾಜ್ಯಗಳಲ್ಲಿ ಗೆದ್ದಿಲ್ಲ: ಎಐಸಿಸಿ ಅಧ್ಯಕ್ಷ ಖರ್ಗೆ

| N/A | Published : Nov 01 2025, 02:00 AM IST / Updated: Nov 01 2025, 04:27 AM IST

Mallikarjun Kharg
ಮೋದಿ ಸಾಮ್ರಾಟನಲ್ಲ, ಎಲ್ಲ ರಾಜ್ಯಗಳಲ್ಲಿ ಗೆದ್ದಿಲ್ಲ: ಎಐಸಿಸಿ ಅಧ್ಯಕ್ಷ ಖರ್ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟೇಲ್‌ ಜನ್ಮದಿನೋತ್ಸವದಲ್ಲಿ ಮೋದಿ ಏಕಾಂಗಿಯಾಗಿ ಕುಳಿತಿದ್ದ ಬಗ್ಗೆ ಮಾತನಾಡಿದ ಖರ್ಗೆ, ‘ನಮ್ಮ ಸಹೋದ್ಯೋಗಿ ಜೈರಾಂ ರಮೇಶ್‌ ಇದರ ತನಿಖೆ ನಡೆಸಿದಾಗ, ಮೋದಿ ಸಾಮ್ರಾಟನಂತೆ ಕುಳಿತಿದ್ದರು ಎಂಬುದು ಗೊತ್ತಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳಲ್ಲಿ ಗೆದ್ದಿಲ್ಲ, ಅವರೇನೂ ಸಾಮ್ರಾಟನಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜನ್ಮದಿನೋತ್ಸವದಲ್ಲಿ ಪ್ರಧಾನಿ ಮೋದಿ ಏಕಾಂಗಿಯಾಗಿ ಕುಳಿತಿದ್ದ ಬಗ್ಗೆ ಮಾತನಾಡಿದ ಖರ್ಗೆ, ‘ನಮ್ಮ ಸಹೋದ್ಯೋಗಿ ಜೈರಾಂ ರಮೇಶ್‌ ಅವರು ಇದರ ತನಿಖೆ ನಡೆಸಿದಾಗ, ಮೋದಿ ಸಾಮ್ರಾಟನಂತೆ ಕುಳಿತಿದ್ದರು ಎಂಬುದು ಗೊತ್ತಾಗಿದೆ. ಆದರೆ ಅವರು ಎಲ್ಲ ರಾಜ್ಯಗಳಲ್ಲಿ ಗೆದ್ದಿಲ್ಲ. ವಿಪಕ್ಷಗಳು ಅವುಗಳನ್ನು ಆಳುತ್ತಿವೆ. ಹೀಗಾಗಿ ಸಾಮ್ರಾಟ ಎಂದು ಕರೆಯಲಾಗದು. ತಪ್ಪಾಗಿಯೂ ಸಾಮ್ರಾಟ ಎನ್ನಬಾರದು’ ಎಂದು ಕಿಡಿಕಾರಿದರು.

ದೇಶದಿಂದ RSS ನಿಷೇಧಿಸಬೇಕು : ಮಲ್ಲಿಕಾರ್ಜುನ ಖರ್ಗೆ

ನವದೆಹಲಿ  : ಕರ್ನಾಕಕದಲ್ಲಿ ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ಚಟುವಟಿಕೆ ನಿಷೇಧಿಸಬೇಕು ಎಂದು ಪತ್ರ ಬರೆದು ಕೋಲಾಹಲವೇ ಸೃಷ್ಟಿಸಿದ್ದಾರೆ. ಈ ಪತ್ರದ ಬೆನ್ನಲ್ಲೇ ಸರ್ಕಾರ ಕೂಡ ಸರ್ಕಾರಿ ಸ್ಥಳ, ಮೈದಾನಗಳಲ್ಲಿ ಎಲ್ಲಾ ಖಾಸಗಿ ಸಂಘ ಸಂಸ್ಥೆಗಳ ಚಟುಟಿಕೆ ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಧಾರವಾಡ ಮಧ್ಯಂತರ ತಡೆ ನೀಡಿದೆ. ಈ ವಾದ ವಿವಾದಗಳ ನಡುವೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರ್‌ಎಸ್ಎಸ್ ದೇಶದಿಂದ ನಿಷೇಧಿಸಬೇಕು ಎಂದಿದ್ದಾರೆ.

ಆರ್‌ಎಸ್ಎಸ್‌ನಿಂದ ದೇಶದ ಕಾನೂನು ಸುವ್ಯವಸ್ಥೆಗೆ ಅಡ್ಡಿ

ಸದ್ಯ ದೇಶದಲ್ಲಿ ವಿಫಲಗೊಂಡಿರುವ ಕಾನೂನು ಸುವ್ಯವಸ್ಥೆಗೆ ಆರ್‌ಎಸ್ಎಸ್ ಹಾಗೂ ಬಿಜೆಪಿ ಕಾರಣವಾಗಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯ. ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ, ಆರ್‌ಎಸ್ಎಸ್ ಸಂಘಟನೆಯನ್ನುಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಸರ್ದಾರ್ ಪಟೇಲ್ 150ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಲ್ಲಿಕಾರ್ಜುನ ಖರ್ಗೆ ಭಾರಿ ಸಂಚಲನ ಸೃಷ್ಟಿಸಿದ್ದಾರೆ

Read more Articles on