ಸಾರಾಂಶ
ಏಕತಾ ನಗರ (ಗುಜರಾತ್) : ‘ಅನ್ಯ ರಾಜಾಡಳಿತದ ಪ್ರದೇಶಗಳಂತೆ, ಇಡೀ ಕಾಶ್ಮೀರವನ್ನೂ ಭಾರತದೊಂದಿಗೆ ವಿಲೀನಗೊಳಿಸಲು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಬಯಸಿದ್ದರು. ಆದರೆ ಅಂದು ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಬಿಡಲಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪಟೇಲ್‌ರ 150ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಗುಜರಾತ್‌ನಲ್ಲಿರುವ ಏಕತೆಯ ಪ್ರತಿಮೆ ಬಳಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಏಕತಾ ದಿವಸ ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ಇತಿಹಾಸವನ್ನು ಬರೆಯುವ ಬದಲು ಅದನ್ನು ರಚಿಸಬೇಕು ಎಂದು ಪ್ರತಿಪಾದಿಸುತ್ತಿದ್ದರು. ಅವರು ರಚಿಸಿದ ನೀತಿಗಳು, ತೆಗೆದುಕೊಂಡ ನಿರ್ಧಾರಗಳು ಹೊಸ ಇತಿಹಾಸ ಸೃಷ್ಟಿಸಿದವು’ ಎಂದು ಸ್ಮರಿಸಿದರು.
ಅಂದಿನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಇದೇ ವೇಳೆ, ಅಂದಿನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಸ್ವಾತಂತ್ರ್ಯಾನಂತರ 550ಕ್ಕೂ ಅಧಿಕ ರಾಜರ ಆಡಳಿತವಿದ್ದ ರಾಜ್ಯಗಳನ್ನು ಒಗ್ಗೂಡಿಸುವ ಸವಾಲಿನ ಕೆಲಸವನ್ನು ಪಟೇಲ್ ಮಾಡಿತೋರಿಸಿದರು. ಅವರಿಗೆ ‘ಒಂದು ಭಾರತ, ಶ್ರೇಷ್ಠ ಭಾರತ’ ಕಲ್ಪನೆ ಮುಖ್ಯವಾಗಿತ್ತು. ಆದರೆ ಇದರಡಿ ಇಡೀ ಕಾಶ್ಮೀರವನ್ನು ಸೇರಿಸಿಕೊಳ್ಳಲು ನೆಹರು ಬಿಡಲಿಲ್ಲ. ಕಾಂಗ್ರೆಸ್‌ನಿಂದಾಗಿ ಅದು ವಿಭಜನೆಯಾಗಿ, ಪ್ರತ್ಯೇಕ ಸಂವಿಧಾನ ಮತ್ತು ಧ್ವಜವನ್ನು ಪಡೆಯಿತು’ ಎಂದು ಬೇಸರ ವ್ಯಕ್ತಪಡಿಸಿದರು. ‘ದೇಶಸೇವೆಯಲ್ಲೇ ತಾವು ಹೆಚ್ಚು ಖುಷಿ ಪಡೆಯುವುದಾಗಿ ಸರ್ದಾರ್ ಪಟೇಲರು ಹೇಳುತ್ತಿದ್ದರು. ತಮ್ಮನ್ನು ತಾವು ರಾಷ್ಟ್ರಸೇವೆಗೆ ಸಮರ್ಪಿಸಿಕೊಳ್ಳುವುದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ’ ಎಂದೂ ಮೋದಿ ಹೇಳಿದರು.
ಅಕ್ರಮ ವಲಸೆ ತಡೆಗಟ್ಟಿ:
‘ಭಾರತದ ಕೆಲವು ಭಾಗಗಳಲ್ಲಿ ಅಕ್ರಮ ವಲಸೆ ಜನಸಂಖ್ಯಾ ಸಮತೋಲನದ ಮೇಲೆ ಪರಿಣಾಮ ಬೀರುತ್ತಿದೆ. ಇದು ದೇಶದ ಏಕತೆ ಮತ್ತು ಸಮಗ್ರತೆಗೆ ದೊಡ್ಡ ಬೆದರಿಕೆ. ದೇಶದ ಜನರು ಇದನ್ನು ತಡೆಗಟ್ಟುವ ಪ್ರತಿಜ್ಞೆ ಮಾಡಬೇಕು’ ಎಂದು ಕರೆ ನೀಡಿದರು.
;Resize=(690,390))
;Resize=(128,128))
;Resize=(128,128))
;Resize=(128,128))