ಸಾರಾಂಶ
ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಗೃಹಸಚಿವರಾಗಿ ಮಾಡಿದ ಸಾಧನೆಗಳು ಮಾದರಿಯಾಗಿವೆ. ಹಿಂದಿನ ಹೈದರಾಬಾದ್ ಕರ್ನಾಟಕದಲ್ಲಿ ಅಂದಿನ ಸನ್ನಿವೇಶಗಳನ್ನು ನೋಡಿದರೆ ಅಖಂಡ ಭಾರತವಾಗಿ ಉಳಿಯುತ್ತದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹುಬ್ಬಳ್ಳಿ:
ಸರ್ದಾರ್ ವಲ್ಲಭಭಾಯಿ ಪಟೇಲ್‌ರ 150ನೇ ಜನ್ಮದಿನದ ಅಂಗವಾಗಿ ಶುಕ್ರವಾರ ಇಲ್ಲಿನ ಮೂರುಸಾವಿರ ಮಠದಿಂದ ದುರ್ಗದ ಬೈಲ್ ವೃತ್ತದ ವರೆಗೆ ಬಿಜೆಪಿ ಹು-ಧಾ ಮಹಾನಗರ ಘಟಕದಿಂದ ವತಿಯಿಂದ ಏಕತಾ ನಡಿಗೆ ನಡೆಯಿತು.ಏಕತಾ ನಡಿಗೆಗೆ ಚಾಲನೆ ನೀಡಿದ ಶಾಸಕ ಮಹೇಶ ಟೆಂಗಿನಕಾಯಿ, ಸರ್ದಾರ್ ವಲ್ಲಭಭಾಯಿ ಪಟೇಲರು ದೇಶದ ಗೃಹಸಚಿವರಾಗಿ ಮಾಡಿದ ಸಾಧನೆಗಳು ಮಾದರಿಯಾಗಿವೆ. ಹಿಂದಿನ ಹೈದರಾಬಾದ್ ಕರ್ನಾಟಕದಲ್ಲಿ ಅಂದಿನ ಸನ್ನಿವೇಶಗಳನ್ನು ನೋಡಿದರೆ ಅಖಂಡ ಭಾರತವಾಗಿ ಉಳಿಯುತ್ತದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲೂ ಪಟೇಲರು ದಿಟ್ಟತನದ ನಿರ್ಧಾರ ತಗೆದುಕೊಳ್ಳುವ ಮೂಲಕ ಅಖಂಡ ಭಾರತವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು ಎಂದರು.
ಪಟೇಲ್‌ರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಜಗತ್ತಿಗೆ ಭಾರತ ಜಗನ್ಮಾತೆಯಾಗಿ ಬೆಳಗಬೇಕು ಎಂಬುದು ನಮ್ಮೆಲ್ಲರ ಕಲ್ಪನೆಯಾಗಿದ್ದು, ಈ ನಿಟ್ಟಿನಲ್ಲಿ ಅಂದು ಪಟೇಲರು ತಾಳಿದ್ದ ಯೋಚನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮೋದಿ ಬಹುದೊಡ್ಡ ಯಶಸ್ಸು ಕಂಡಿದ್ದಾರೆ. ಆ ಕಾರಣಕ್ಕಾಗಿ ದೇಶಾದ್ಯಂತ ಬಿಜೆಪಿಯಿಂದ ಏಕತಾ ನಡಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ, ಭಾರತದ ಏಕತೆಗಾಗಿ ಬಿಜೆಪಿಯಿಂದ ದೇಶ ಹಾಗೂ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ನಡಿಗೆಗೆ ಮೋದಿ ಚಾಲನೆ ನೀಡುವ ಮೂಲಕ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ ಎಂದರು.
ಈ ವೇಳೆ ಮೇಯರ್ ಜ್ಯೋತಿ ಪಾಟೀಲ್, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಿವು ಮೆಣಸಿನಕಾಯಿ, ಮಾಧ್ಯಮ ವಕ್ತಾರ ರಾಜು ಕೋರ್ಯಾಣಮಠ, ರವಿ ನಾಯಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಲದ್ವಾ ಸೇರಿದಂತೆ ಮಂಡಲ ಅಧ್ಯಕ್ಷರು, ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))