ಸಾರಾಂಶ
ಪ್ರಧಾನಿ ಮೋದಿ ವಿಡಿಯೋ ಗೇಮರ್ಸ್‌ಗಳ ಜೊತೆ ನಡೆಸಿದ ಸಂವಾದದಲ್ಲಿ ‘ರಾಜಿ-ಒಂದು ದಂತಕಥೆ’ ಎಂಬ ವಿಡಿಯೋ ಗೇಮ್ ಆಡಿ ಗಮನ ಸೆಳೆದರು
ನವದೆಹಲಿ: ಪ್ರಧಾನಿ ಮೋದಿ ವಿಡಿಯೋ ಗೇಮರ್ಸ್‌ಗಳ ಜೊತೆ ನಡೆಸಿದ ಸಂವಾದದಲ್ಲಿ ‘ರಾಜಿ-ಒಂದು ದಂತಕಥೆ’ ಎಂಬ ವಿಡಿಯೋ ಗೇಮ್ ಆಡಿ ಗಮನ ಸೆಳೆದರು.
ಈ ವಿಡಿಯೋ ಗೇಮನ್ನು 2020ರಲ್ಲಿ ಲಾಂಚ್ ಮಾಡಿದ್ದು, ಹಲವು ಪ್ರಶಸ್ತಿಯನ್ನು ಪಡೆದಿದೆ. ಇದರಲ್ಲಿ ಗೋಲು ಮತ್ತು ರಾಜಿ ಎಂಬ ಸೋದರ-ಸೋದರಿಯರಿರುತ್ತಾರೆ. ಅವರು ಕಾರಣಾಂತರಗಳಿಂದ ಬೇರೆ ಬೇರೆಯಾದಾಗ ರಾಜಿ ತನ್ನ ಸೋದರನನ್ನು ಮಹಾಬಲಾಸುರ ಎಂಬ ರಾಕ್ಷಸನನ್ನು ಸಂಹರಿಸುವ ಮೂಲಕ ರಕ್ಷಿಸುವುದೇ ಅಟದ ಪ್ರಮುಖ ಸಾರಾಂಶವಾಗಿದೆ.