ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ 8 ಗಂಟೆಗೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಸುಮಾರು 45 ನಿಮಿಷ ದೇಗುಲದಲ್ಲಿ ಕಳೆಯಲಿರುವ ಪ್ರಧಾನಿ
ತಿರುಮಲ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಗ್ಗೆ 8 ಗಂಟೆಗೆ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.ಸುಮಾರು 45 ನಿಮಿಷ ದೇಗುಲದ ಆವರಣದಲ್ಲಿ ಕಳೆಯಲಿರುವ ಅವರು, ಕೆಲಕಾಲ ವಿಶ್ರಾಂತಿ ಗೃಹದಲ್ಲಿದ್ದು ನಂತರ ವಿಮಾನದ ಮೂಲಕ ಸಿಕಂದರಾಬಾದ್‌ಗೆ ಪಯಣ ಬೆಳೆಸಲಿದ್ದಾರೆ.ಪ್ರಧಾನಿ ಮೋದಿ ಭಾನುವಾರ ಸಂಜೆಯೇ ತಿರುಪತಿಗೆ ಬಂದು ತಂಗಿದ್ದು, ಅವರನ್ನು ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ ರೆಡ್ಡಿ ಸ್ವಾಗತಿಸಿದರು. ಮೋದಿ ಅವರು ದೇವರ ದರ್ಶನ ಮಾಡುವಾಗ ರೆಡ್ಡಿ ಕೂಡ ಹಾಜರಿರಲಿದ್ದಾರೆ.